ಮಂಗಳೂರು: ಕ್ರೈಸ್ತ ಪರಿಷತ್‌ನಿಂದ ಕ್ರೈಸ್ತ ಸಮುದಾಯ ಭವನಕ್ಕೆ 249.25ಲಕ್ಷ ರೂ ಅನುದಾನ ಬಿಡುಗಡೆ
ಮಂಗಳೂರು.ಮಾ,1: ಕ್ರೈಸ್ತ ಅಭಿವೃದ್ಧಿ ಪರಿಷತ್‌ನಿಂದ 2015-17ರವರೆಗಿನ ವಾರ್ಷಿಕ ಯೋಜನೆಗಳಲ್ಲಿ ಗರಿಷ್ಠ ಅನುದಾನ ಬಿಡುಗಡೆ ಮಾಡಲಾಗಿದೆ ಮತ್ತು ತ್ವರಿತ ,ಕಾಮಗಾರಿ ನಡೆದಿದೆ ಎಂದು ಪರಿಷತ್‌ನ ಪ್ರಗತಿ ಪರಿಶೀಲನೆಯ ಬಳಿಕ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಯೋಜನೆಯಲ್ಲಿ ಚರ್ಚ್‌ಗಳ ಅಭಿವೃದ್ಧಿ,ಕಂಪೌಂಡ್ ಗೋಡೆ ನಿರ್ಮಾಣ,ಅನಾಥಾಲಯಗಳಿಗೆ ಸಹಾಯ ನೀಡಲಾಗುತ್ತದೆ.2014-15ರಲ್ಲಿ 20 ಚರ್ಚ್‌ಗಳ ಅಭಿವೃದ್ಧಿಗೆ 460 ಲಕ್ಷ ರೂ. ಬಿಡುಗಡೆಯಾಗಿದೆ.2015-16ರಲ್ಲಿ 11ಚರ್ಚ್‌ಗಳ ಅಭಿವೃದ್ದಿಗೆ 257 ಲಕ್ಷ ರೂ. ವೆಚ್ಚ ಮಾಡಲಾಗಿದೆ.2016-17ರಲ್ಲಿ 15 ಚರ್ಚಗಳ ಅಭಿವೃದ್ಧಿಗೆ 197 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.
ಸಮುದಾಯ ಭವನ ನಿರ್ಮಾಣಕ್ಕಾಗಿ ಮೂರು ವರ್ಷಗಳಲ್ಲಿ ಕ್ರಮವಾಗಿ 93.37ಲಕ್ಷ, 25ಲಕ್ಷ ಮತ್ತು 2016-17ರಲ್ಲಿ 249.25 ಲಕ್ಷ ರೂ ಬಿಡುಗಡೆ ಮಾಡಲಾಗಿದೆ.
ಅನಾಥಾಶ್ರಮಗಳಿಗಾಗಿ ಮೂರು ವರ್ಷಗಳಲ್ಲಿ 72ಲಕ್ಷ, 198ಲಕ್ಷ ,ಮತ್ತು 60.89ಲಕ್ಷ ರೂ ಬಿಡುಗಡೆ ಮಾಡಲಾಗಿದೆ ಎಂದು ಐವನ್ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ದ.ಕ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಉಸ್ಮಾನ್,ಕ್ರೈಸ್ತ ಪರಿಷತ್‌ನ ಸದಸ್ಯ ಸೆಬಾಸ್ಟಿನ್,ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಸದಸ್ಯ ಮಾರ್ಸೆಲ್ ಮೊಂತೆರೋ ಮೊದಲಾದವರು ಉಪಸ್ಥಿತರಿದ್ದರು.