ಹಳೆಯಂಗಡಿ ಕದಿಕೆ ಉರೂಸ್ ಸಮಾರಂಭ ಉದ್ಘಾಟನೆ
ಮುಲ್ಕಿ, ಮಾ.1: ಹಝ್ರತ್ ಸೈಯದ್ ಮೌಲಾನಾ ವಲಿಯುಲ್ಲಾಯಿ ಅವರ ಸಂಸ್ಮರಣೆಯ 2ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಹಳೆಯಂಗಡಿ ಕದಿಕೆ ಉರೂಸ್ ಸಮಾರಂಭಕ್ಕೆ ದ.ಕ.ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು.
ಸಮಾರಂಭಕ್ಕೂ ಮೊದಲು ಹಝ್ರತ್ ಸೈಯದ್ ಮೌಲಾನಾ ವಲಿಯುಲ್ಲಾಯಿ ಅವರ ಝಿಯಾರತ್ ನೆರವೇರಿಸುವ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಔಲಿಯಾಗಳು ಎಂದರೆ ಒಂದೊಂದು ಸಂಘಟನೆಗಳು ಅವರ ಕರಾಮತ್ ಗಳನ್ನು ಜನತೆಗೆ ತಿಳಿಹೇಳಿ ಸತ್ಯಮಾರ್ಗಕ್ಕೆ ಆಹ್ವಾನ ನೀಡುವ ಕಾರ್ಯಕ್ರಮಗಳಾಗಿವೆ ಉರೂಸ್ ಗಳು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ರಹಿಮಾನ್ ಫೈಝಿ ವಹಿಸಿದ್ದರು. ಅಶ್ರಫ್ ರಹ್ಮಾನಿ ಚೌಕಿ ಮುದರ್ರಿಸ್ ಜುಮಾ ಮಸೀದಿ ದೇರಳಕಟ್ಟೆ ಮುಖ್ಯ ಪ್ರಭಾಷಣಗೈದರು.
ಜಮಾಅತ್ ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಾಗ್, ಉರೂಸ್ ಸಮಿತಿಯ ಅಧ್ಯಕ್ಷ ಬಶೀರ್ ಅಹ್ಮದ್ ಕಲ್ಲಾಪು, ಇ.ಎಂ. ಅಬ್ದುಲ್ಲಾ ಮದನಿ, ಇಸ್ಮಾಯೀಲ್ ದಾರಿಮಿ ಸಂತೆಕಟ್ಟೆ, ಹನೀಫ್ ದಾರಿಮಿ ಇಂದಿರಾನಗರ ಮತ್ತಿತರರು ಉಪಸ್ಥಿತರಿದ್ದರು.