‘ಚಾಪ್ಟರ್’ ತುಳು ಸಿನೆಮಾ ಎಪ್ರಿಲ್‌ನಲ್ಲಿ ತೆರೆಗೆ
ಮಂಗಳೂರು, ಮಾ.1: ಎಲ್.ವಿ.ಪ್ರೊಡಕ್ಷನ್ ಲಾಂಛನದಲ್ಲಿ ಮೋಹನ್ ಭಟ್ಕಳ ನಿರ್ದೇಶನದ ಚಾಪ್ಟರ್ ತುಳು ಸಿನೆಮಾ ಎಪ್ರಿಲ್ ಮೊದಲ ವಾರ ತೆರೆ ಕಾಣಲಿದೆ. ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ತಿಳಿಸಿದ ಚಿತ್ರದ ನಿರ್ದೇಶಕ ಮೋಹನ್ ಭಟ್ಕಳ, ಸಿನೆಮಾದ ಧ್ವನಿ ಸುರುಳಿ ಮಾ.5ರಂದು ಫೋರಂ ಫಿಝಾ ಮಾಲ್‌ನಲ್ಲಿ ಸಂಜೆ 6 ಗಂಟೆಗೆ ಬಿಡುಗಡೆಗೊಳ್ಳಲಿದೆ ಎಂದರು. ಸುರೇಂದ್ರನಾಥ್ ಸಂಗೀತ ನಿರ್ದೇಶನ ನೀಡಿದ್ದು, ಉಮೇಶ್ ಮಿಚಾರ್ ಐಟಂ ಸಾಂಗ್ ಒದಗಿಸಿದ್ದಾರೆ. ಲೋಕು ಕುಡ್ಲ ಪ್ರೇ ಗೀತೆಯನ್ನು ಬರೆದಿದ್ದು, ಕಿಶೋರ್ ಮೂಡುಬಿದಿರೆ ಎರಡು ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ತುಳು ಚಿತ್ರರಂಗದ ಛಾಯಾಗ್ರಾಹಕ ಬಾಲಗಣೇಶನ್ ಚಿತ್ರದಲ್ಲಿ ಕೈಚಳಕವನ್ನು ಪ್ರದರ್ಶಿಸಿದ್ದಾರೆ. ನಾಯಕ ನಟನಾಗಿ ಅಸ್ತಿಕ್ ಶೆಟ್ಟಿ ಜೊತೆ ತುಳುವಿನ ಹಾಸ್ಯ ನಟ ಅರವಿಂದ ಬೋಳಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯರಾಗಿ ಐಶ್ವರ್ಯ ಹೆಗ್ಡೆ ಹಾಗೂ ಸಂಜನಾ ನಾಯ್ಡು ನಟಿಸಿದ್ದಾರೆ ಎಂದವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಟ ಅಸ್ತಿಕ್ ಶೆಟ್ಟಿ, ತುಷಾರ್ ಶೆಟ್ಟಿ ಉಪಸ್ಥಿತರಿದ್ದರು.