×
Ad

ಇಂದಿನಿಂದ ವಿಚಾರ ಸಂಕಿರಣ

Update: 2017-03-02 00:12 IST

ಮಂಗಳೂರು, ಮಾ.1: ಬೆಂಗಳೂರು ನಿಮ್ಹಾನ್ಸ್ ಮತ್ತು ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯಗಳ ಸಂಯುಕ್ತಾಶ್ರಯದಲ್ಲಿ ‘ಇಂಟಿಗ್ರೇಶನ್ ಆಫ್ ಹ್ಯೂಮನ್ ರೈಟ್ಸ್ ಬೇಸ್ಡ್ ಅಪ್ರೋಚಸ್ ಇನ್ ಹೆಲ್ತ್‌ಕೇರ್ ಪ್ರಾಕ್ಟೀಸಸ್’ ವಿಷಯ ಕುರಿತ 3 ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ರೋಶನಿ ನಿಲಯದ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಾ.2ರಂದು ಪೂರ್ವಾಹ್ನ 10ಕ್ಕೆ ಮಂಗಳೂರು ವಿವಿ ಕುಲಪತಿ ಡಾ.ಕೆ.ಭೈರಪ್ಪ ವಿಚಾರ ಸಂಕಿರಣವನ್ನು ಉದ್ಘಾಟಿಸುವರು. ಕರ್ನಾಟಕ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾೀಶ ಡಾ.ಎನ್.ಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ‘ಅಬ್‌ಸ್ಟ್ರಾಕ್ಟ್’ ಪುಸ್ತಕವನ್ನು ಬಿಡುಗಡೆ ಗೊಳಿಸುವರು. ನಿಮ್ಹಾನ್ಸ್‌ನ ಕುಲಸಚಿವ ಡಾ.ಕೆ.ಶೇಖರ್ ‘ವೌನ’ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿದ್ದಾರೆ.

ಮಾ.4ರಂದು ಅಪರಾಹ್ನ 3:30ಕ್ಕೆ ನಡೆಯುವ ಸಮಾರೋಪದಲ್ಲಿ ಪಶ್ಚಿಮ ವಲಯ ಐಜಿಪಿ ಪಿ. ಹರಿಶೇಖರನ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News