×
Ad

ಮಾ.7: 'ಬ್ಯಾರೀಸ್ ಛೇಂಬರ್ ಆಫ್ ಕಾರ್ಮಸ್' ವತಿಯಿಂದ ಜಿಎಸ್‌ಟಿ ಕುರಿತು ವಿಚಾರ ಸಂಕಿರಣ

Update: 2017-03-02 13:51 IST

ಮಂಗಳೂರು, ಮಾ.2: ಬ್ಯಾರೀಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ)ವತಿಯಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಕುರಿತ ವಿಚಾರ ಸಂಕಿರಣವೊಂದನ್ನು ಮಾ.7ರಂದು ಸಂಜೆ 4:30ಕ್ಕೆ ಹಂಪನಕಟ್ಟೆ ಮಸ್ಜಿದುನ್ನೂರು ಬಳಿಯ ಐಎಂಎ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಜಿಎಸ್‌ಟಿ ಜುಲೈ 1ರಿಂದ ಜಾರಿಗೊಳ್ಳಲಿದೆ. ಇದು ಈಗಿರುವ ಎಲ್ಲ ತೆರಿಗೆಗಳನ್ನು ಏಕೀಕೃತ ತೆರಿಗೆ ವ್ಯವಸ್ಥೆಯಲ್ಲಿ ವಿಲೀನಗೊಳಿಸುವ ಪರೋಕ್ಷ ಪದ್ಧತಿಯಾಗಿದೆ. ಕೇಂದ್ರೀಯ ಮತ್ತು ರಾಜ್ಯ ತೆರಿಗೆಗಳ ವಿಲೀನದಿಂದಾಗಿ ಇಮ್ಮಡಿ ತೆರಿಗೆ ಪಾವತಿಯು ತಪ್ಪುತ್ತದೆ ಮತ್ತು ಸಾಮಾನ್ಯ ರಾಷ್ಟ್ರೀಯ ಮಾರುಕಟ್ಟೆಗೆ ಅನುಕೂಲ ಕಲ್ಪಿಸುತ್ತದೆ.

ಅಂದು ನಡೆಯುವ ಕಾರ್ಯಕ್ರಮದಲ್ಲಿ ಜಿಎಸ್‌ಟಿ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರಾದ ಬಿ.ಎ.ನಾಣಿಯಪ್ಪ, ಎಚ್.ಜಿ.ಪವಿತ್ರಾ, ವಾಣಿಜ್ಯ ತೆರಿಗೆಗಳ ಉಪ ಆಯುಕ್ತ ಶಂಭು ಭಟ್, ಎಸಿಟಿಒರಾದ ವಿಜಯ ಕುಮಾರ್ ಬತಡ್ ಮತ್ತು ಟಿ.ಆರ್.ಕೃಷ್ಣ ಕುಮಾರ್ ಮಾಹಿತಿ ನೀಡುವರು.

ವಾಣಿಜೋದ್ಯಮಿಗಳು, ವರ್ತಕರು, ಲೆಕ್ಕಾಧಿಕಾರಿಗಳು ಇದರಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳುವಂತೆ ಬಿಸಿಸಿಐ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News