ವಿದ್ಯುತ್ ಕಂಬದಿಂದ ಬಿದ್ದು ಮೆಸ್ಕಾಂ ಕಾರ್ಮಿಕ ಮೃತ್ಯು
Update: 2017-03-02 14:29 IST
ಪುತ್ತೂರು,ಮಾ.2: ವಿದ್ಯುತ್ ಕಂಬಕ್ಕೆ ಹತ್ತಿ ದುರಸ್ತಿ ಮಾಡುತ್ತಿದ್ದ ವೇಳೆಯಲ್ಲಿ ಕಂಬದ ಮೇಲಿನಿಂದ ಹಾದು ಹೋಗಿದ್ದ ಎಚ್‌ಟಿ ಲೈನ್ ವಿದ್ಯುತ್ ತಂತಿ ಸ್ಪರ್ಷವಾಗಿ ಕೆಳಕ್ಕೆ ಬಿದ್ದು ಮೆಸ್ಕಾಂ ಕಾರ್ಮಿಕರೊಬ್ಬರು ದಾರುಣವಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಸೊರಕೆ ಪರಂಟೋಲು ಎಂಬಲ್ಲಿ ಗುರುವಾರ ಮದ್ಯಾಹ್ನ ನಡೆದಿದೆ.
ಬಾಗಲಕೋಟೆ ನಿವಾಸಿ ಶ್ರೀಶೈಲ(28) ಮೃತಪಟ್ಟ ಕಾರ್ಮಿಕ. ಶ್ರೀಶೈಲ ಅವರು ಕಳೆದ ಒಂದು ವರ್ಷಗಳಿಂದ ಪುತ್ತೂರು ಮೆಸ್ಕಾಂ ವಿಭಾಗದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಗುರುವಾರ ಮದ್ಯಾಹ್ನ ವಿದ್ಯುತ್ ಕಂಬದ ಮೇಲೆ ದುರಸ್ತಿ ಮಾಡುತ್ತಿದ್ದ ವೇಳೆಯಲ್ಲಿ ಈ ಕಂಬದ ಪಕ್ಕದಲ್ಲಿ ಹಾದುಹೋಗಿದ್ದ ಎಚ್‌ಟಿ ಲೈನ್ ತಂತಿ ಸ್ಪರ್ಷಿಸಿ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ. ದುರಸ್ತಿ ವೇಳೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸದಿರುವ ಕಾರಣ ಈ ದುರಂತ ಸಂಭವಿಸಿರುವುದಾಗಿ ತಿಳಿದು ಬಂದಿದೆ.