×
Ad

ಕಲ್ಲಗುಡ್ಡೆ : ಮದ್ರಸ ಕಟ್ಟಡ ಉದ್ಘಾಟನೆ

Update: 2017-03-02 15:58 IST

ವಿಟ್ಲ, ಮಾ.2: ಅರಳ-ಕಲ್ಲಗುಡ್ಡೆ ಸಂಶುಲ್ ಉಲಮಾ ನಗರದ ಹಿದಾಯತುಲ್ ಇಸ್ಲಾಮ್ ಜುಮಾ ಮಸೀದಿ ಅಧೀನದ ನೂತನ ಮದ್ರಸ ಕಟ್ಟಡದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.

ನೂತನ ಮದ್ರಸ ಕಟ್ಟಡವನ್ನು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಉದ್ಘಾಟಿಸಿದರು.

ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುವಾಶಿರ್ವಚನಗೈದರು. ಸ್ಥಳೀಯ ಮಸೀದಿ ಅಧ್ಯಕ್ಷ ಅಬ್ದುಲ್ ಕರೀಂ ಅಧ್ಯಕ್ಷತೆ ವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್‌ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಮುಖ್ಯ ಭಾಷಣಗೈದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್.ಖಾದರ್, ದ.ಕ. ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ತುಂಗಪ್ಪ ಬಂಗೇರ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪಿಯೂಸ್ ಎಲ್. ರೊಡ್ರಿಗಸ್, ಬಂಟ್ವಾಳ ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪಸಾಲ್ಯಾನ್, ರಾಜೇಂದ್ರ ಶೆಟ್ಟಿ ಅರಳ, ಬಂಟ್ವಾಳ ತಾಪಂ ಸದಸ್ಯೆ ಮಂಜುಳಾ, ಅರಳ ಗ್ರಾಪಂ ಉಪಾಧ್ಯಕ್ಷ ಜಗದೀಶ ಆಳ್ವ, ಸದಸ್ಯರಾದ ಲಕ್ಷ್ಮೀಧರ ಶೆಟ್ಟಿ, ಎಂ.ಬಿ.ಅಶ್ರಫ್, ಬಂಟ್ವಾಳ ಎಪಿಎಂಸಿ ಸದಸ್ಯ ಪದ್ಮರಾಜ್ ಬಳ್ಳಾಲ್ ಮಾವಂತೂರು, ಗೇರು ಅಭಿವೃದ್ಧಿ ನಿಗಮದ ನಿರ್ದೇಶಕ ಜಗದೀಶ ಕೊಯ್ಲ, ಕುಂಬ್ರ ಕೆಐಸಿ ಮೆನೇಜರ್ ಹುಸೈನ್ ದಾರಿಮಿ ರೆಂಜಲಾಡಿ, ಅರಳ-ಪಾಡಿ ದಾರುಸ್ಸಲಾಂ ಮದ್ರಸ ಅಧ್ಯಕ್ಷ ಎಂ.ಎಚ್.ಮೊಯ್ದಿನ್ ಹಾಜಿ ಮೊದಲಾದವರು ಶುಭ ಹಾರೈಸಿದರು. ಅರಳ ಜುಮಾ ಮಸೀದಿಯ ಅಧ್ಯಕ್ಷ ಕೆ.ಎಚ್.ಖಾದರ್, ಖತೀಬ್ ಅಯ್ಯೂಬ್ ಮುಸ್ಲಿಯಾರ್, ಮೂಲರಪಟ್ಣ ಮಸೀದಿ ಅಧ್ಯಕ್ಷ ವಿ.ಎಚ್.ಹುಸೈನಬ್ಬ, ಖತೀಬ್ ಹಾಜಿ ಅಬ್ದುಲ್ ಖಾದರ್ ಮದನಿ, ಹಾಜಿ ಎಂ.ಎ.ಉಮರ್ ಮುಸ್ಲಿಯಾರ್ ಅರಳ, ಮಾವಿನಕಟ್ಟೆ ಜುಮಾ ಮಸೀದಿಯ ಖತೀಬ್ ಅಬ್ದುಲ್ ಜಬ್ಬಾರ್ ಸಅದಿ, ಕಲ್ಲಗುಡ್ಡೆ ಹಿದಾಯತುಲ್ ಇಸ್ಲಾಂ ಜುಮಾ ಮಸೀದಿಯ ಗೌರವಾಧ್ಯಕ್ಷ ಹಸೈನಾರ್ ಮುಸ್ಲಿಯಾರ್, ಕಲ್ಲಗುಡ್ಡೆ ಮದ್ರಸ ಮುಖ್ಯ ಶಿಕ್ಷಕ ಹನೀಫ್ ಝುಹ್‌ರಿ, ಉದ್ಯಮಿ ತಾಜ್ ಮುಹಮ್ಮದ್ ಸಂಪಾಜೆ, ಕುಪ್ಪೆಪದವು ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಲತೀಫ್, ಉದ್ಯಮಿ ಕೆ.ಎಚ್.ಖಾದರ್ ಕೊಯ್ಲ, ಅರಳ ಗ್ರಾಪಂ ಮಾಜಿ ಸದಸ್ಯ ಹನೀಫ್, ಕಲ್ಲಗುಡ್ಡೆ ಮದ್ರಸ ಶಿಕ್ಷಕ ಕಮಾಲುದ್ದೀನ್ ಮುಸ್ಲಿಯಾರ್, ಮುಸ್ತಫಾ ಅರ್ಶದಿ ಕಲ್ಲಗುಡ್ಡೆ, ಉಬೈದುಲ್ಲಾ ಮುಸ್ಲಿಯಾರ್ ಪಾದೆ, ಎಸ್ಕೆಎಸ್ಸೆಸ್ಸೆಫ್ ಕಲ್ಲಗುಡ್ಡೆ ಶಾಖಾಧ್ಯಕ್ಷ ಅಬ್ದುಲ್ ಸತ್ತಾರ್ ಕೌಸರಿ, ಮಸೀದಿ ನಿರ್ಮಾಣ ಸಮಿತಿಯ ಅಧ್ಯಕ್ಷ ಅಬ್ದುಲ್ ಲತೀಫ್, ಕಲ್ಲಗುಡ್ಡೆ ಬಿವೈಎ ಅಧ್ಯಕ್ಷ ಹಮೀದ್ ಪಿ., ಕಲ್ಲಗುಡ್ಡೆ ರಹ್ಮಾನಿಯಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯೀಲ್ ಪಿ. ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಮದ್ರಸ ಕಟ್ಟಡದ ಗುತ್ತಿಗೆದಾರ ಆದಂ ಕಲಾಯಿ ಹಾಗೂ ಮೇಸ್ತ್ರಿ ಬಶೀರ್ ಅವರನ್ನು ಸನ್ಮಾನಿಸಲಾಯಿತು.

ಮುನ್ನಾ ದಿನ ಕೇರಳ-ವಯನಾಡಿನ ಅಬ್ದುಲ್ ಅಝೀಝ್ ಫೈಝಿಯವರಿಂದ ಧಾರ್ಮಿಕ ಪ್ರಚನ ನಡೆಯಿತು. ಸೈಯದ್ ಸಿರಾಜುದ್ದೀನ್ ಪೂಕುಂಞಿ ಫೈಝಿ ತಂಙಳ್ ದುವಾಶಿರ್ವಚನಗೈದರು.

ಕಲ್ಲಗುಡ್ಡೆ ಜುಮಾ ಮಸೀದಿಯ ಖತೀಬ್ ಮುಸ್ತಫಾ ಅಝ್‌ಹರಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಹಿದಾಯತುಲ್ಲಾ ಶುಂಠಿಹಿತ್ಲು ಸ್ವಾಗತಿಸಿದರು. ಕುಂಬ್ರ ಕೆಐಸಿ ಹಿಫ್ಲ್ ವಿದ್ಯಾರ್ಥಿಗಳಾದ ಮುನವ್ವರ್ ಹಾಗೂ ತ್ವಾಹಾ ಸಾಲಿಂ ಕಿರಾಅತ್ ಪಠಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News