ಮಾ.3ರಂದು ಕಣಚೂರು ಆಸ್ಪತ್ರೆ ಕ್ಷಯ ಜಾಗೃತಿ ಪೋಸ್ಟರ್ ಬಿಡುಗಡೆ, ನ್ಯೂ ಫಿಸಿಯೋಥೆರಪಿ ಕ್ಲಿನಿಕ್ ಉದ್ಘಾಟನೆ
Update: 2017-03-02 16:01 IST
ಮಂಗಳೂರು, ಮಾ.2: ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನಾಟೆಕಲ್ ಜಿಲ್ಲಾ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಜಿಲ್ಲಾ ಕ್ಷಯ ನಿಯಂತ್ರಣ ಕಚೇರಿ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಇದರ ಆಶ್ರಯದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ -2017 ಹಮ್ಮಿಕೊಳ್ಳಲಾಗಿದೆ.
ಇದರ ಅಂಗವಾಗಿ, ಜಿಲ್ಲಾ ಕ್ಷಯರೋಗ ಜಾಗೃತಿ ಪೋಸ್ಟರ್ ಬಿಡುಗಡೆ ಮತ್ತು ಹೊಸ ಫಿಸಿಯೋಥೆರಪಿ ಕ್ಲಿನಿಕಲ್ ಘಟಕ ಉದ್ಘಾಟನೆ ಮಾ.3ರಂದು ಮಧ್ಯಾಹ್ನ 3 ಗಂಟೆಗೆ, ಸನ್ಮಾನ್ಯ ಡಾ ಶರಣ್ ಪ್ರಕಾಶ್ ಪಾಟೀಲ್, ಆರೋಗ್ಯ ಶಿಕ್ಷಣ ಸಚಿವ, ಕರ್ನಾಟಕ ಸರ್ಕಾರ ಉದ್ಘಾಟಿಸಲಿದ್ದಾರೆ.
ಡಾ ಕೆ.ಎಸ್ ರವೀಂದ್ರನಾಥ್, ಉಪಕುಲಪತಿ, ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಆರೋಗ್ಯ ವಿಜ್ಞಾನ, ಬೆಂಗಳೂರು, ಮುಖ್ಯ ಆತಿಥ್ಯ ವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.