×
Ad

ನೋಟು ರದ್ದತಿ:ಆಟೋ,ಟ್ರಾಕ್ಟರ್ ಕಂಪನಿಗಳಿಗೆ 8,000 ಕೋ.ರೂ.ನಷ್ಟ

Update: 2017-03-02 17:36 IST

ಹೊಸದಿಲ್ಲಿ,ಮಾ.2: ನೋಟು ರದ್ದತಿ ಕ್ರಮದಿಂದಾಗಿ ಕಳೆದ ವರ್ಷದ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ದೇಶದ ವಾಹನ ಮತ್ತು ಟ್ರಾಕ್ಟರ್ ತಯಾರಿಕೆ ಕ್ಷೇತ್ರಗಳಿಗೆ 8,000 ಕೋ.ರೂ.ಗಳ ಆದಾಯ ನಷ್ಟವಾಗಿದೆ ಎಂದು ಮಹಿಂದ್ರಾ ಆ್ಯಂಡ್ ಮಹಿಂದ್ರಾದ ಆಡಳಿತ ನಿರ್ದೇಶಕ ಪವನ್ ಗೋಯೆಂಕಾ ಅವರು ತಿಳಿಸಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕಳೆದ ವರ್ಷದ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಹಬ್ಬಗಳ ಋತುವಿನ ಬಳಿಕ ವಾಹನ ಕ್ಷೇತ್ರದಲ್ಲಿ ಮಾರಾಟ ಉತ್ತುಂಗದಲ್ಲಿತ್ತು. ಆದರೆ ನ.8ರಂದು ನೋಟು ನಿಷೇಧ ಪ್ರಕಟಣೆಯ ಬಳಿಕ ಮಾರಾಟದಲ್ಲಿ ತೀವ್ರ ಕುಸಿತವುಂಟಾಗಿತ್ತು ಎಂದರು.

2015ರ ಇದೇ ಅವಧಿಗೆ ಹೋಲಿಸಿದರೆ 2016,ನವಂಬರ್‌ನಲ್ಲಿ ಎಲ್ಲ ವರ್ಗಗಳ ವಾಹನಗಳ ಮಾರಾಟದಲ್ಲಿ ಶೇ.5.48 ಕುಸಿತವುಂಟಾಗಿತ್ತು. ವಾಹನಳ ಮಾರಾಟ 2013,ಮಾರ್ಚ್‌ನಲ್ಲಿ ಶೇ.7.75ರಷ್ಟು ಕುಸಿದಿದ್ದು, ನಂತರದ 43 ತಿಂಗಳುಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಕುಸಿತ ಕಂಡುಬಂದಿದೆ. ಡಿಸೆಂಬರ್‌ನಲ್ಲಿ ಮಾರಾಟ ಪ್ರಮಾಣ ಶೇ.18.66ರಷ್ಟು ಕುಸಿದಿದ್ದು, ಇದು ಕಳೆದ 16 ವರ್ಷಗಳ ಇತಿಹಾಸದಲ್ಲಿ ಕನಿಷ್ಠವಾಗಿದೆ.

ಇದಕ್ಕೂ ಮುನ್ನ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಮಾರಾಟ ಪ್ರಮಾಣ ಅನುಕ್ರಮವಾಗಿ ಶೇ.20.16 ಮತ್ತು ಶೇ 8.14 ಏರಿಕೆ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News