×
Ad

ಮಂಗಳೂರು: 'ಡಿಜಿಟಲ್ ಇಂಡಿಯಾ' ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

Update: 2017-03-02 18:24 IST

ಮಂಗಳೂರು, ಮಾ.2: ಕಂಪ್ಯೂಟರ್, ಎಟಿಎಂ ಬಳಕೆ ಮಾಡುವಂತದ್ದು ಮಾತ್ರ ಡಿಜಿಟಲೈಸೇಶನ್ ಎಂದು ಪರಿಗಣಿಸುವುದು ಸರಿಯಲ್ಲ.ಡಿಜಿಟಲೀಕರಣಕ್ಕೆ ತೆರೆದುಕೊಳ್ಳುವುದು ಅಷ್ಟು ಸುಲಭವಲ್ಲ. ಇಲ್ಲಿಯೂ ನೂರಾರು ಸವಾಲುಗಳಿವೆ.ಅವುಗಳನ್ನು ಸ್ವೀಕರಿಸಿಕೊಂಡರೆ ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳುವುದು ಸಾಧ್ಯ ಎಂದು ದ.ಕ. ಜಿಪಂ ಸಿಇಒ ಡಾ. ಎಂ. ಆರ್. ರವಿ ಹೇಳಿದರು.

  ನಗರದ ಕೆನರಾ ಕಾಲೇಜಿನ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಸ್ಟಡೀಸ್ ಇನ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಮತ್ತು ಮಂಗಳೂರು ವಿವಿ ವಾಣಿಜ್ಯ ಅಧ್ಯಾಪಕರ ಸಂಘದ (ಮುಕ್ತಾ) ಸಂಯುಕ್ತ ಆಶ್ರಯದಲ್ಲಿ ಕೆನರಾ ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆದ ಱಕ್ಯಾನ್‌ಕಾನ್-2017 'ಡಿಜಿಟಲ್ ಇಂಡಿಯಾ ಪ್ರಾಸ್ಪೆರಿಂಗ್ ಇಂಡಿಯಾ' ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಿಜಿಟಲ್ ಇಂಡಿಯಾ ಪರಿಕಲ್ಪನೆ ಇತ್ತೀಚೆಗೆ ಮಹತ್ವ ಪಡೆದುಕೊಳ್ಳುತ್ತಿದೆ. ಕೇವಲ ಕಾರ್ಪೋರೇಟ್ ರಂಗಗಳಲ್ಲಿ ಮಾತ್ರವಲ್ಲದೇ ಸಾಮಾಜಿಕ-ಆರ್ಥಿಕ ಕ್ಷೇತ್ರದಲ್ಲಿಯೂ ಇದು ಪ್ರಾಮುಖ್ಯ ಪಡೆದುಕೊಳ್ಳುತ್ತಿದೆ ಎಂದು ಡಾ. ರವಿ ನುಡಿದರು.

ಅಚಲ್ ಕೃಷ್ಣ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸಿಎಚ್‌ಎಸ್ ಅಸೋಸಿಯೇಶನ್‌ನ ಅಧ್ಯಕ್ಷ ಎಸ್. ಎಸ್. ಕಾಮತ್, ಉಪಾಧ್ಯಕ್ಷ ಎಂ. ಅಣ್ಣಪ್ಪ ಪೈ, ಕಾರ್ಯದರ್ಶಿ ಎಂ. ರಂಗನಾಥ್ ಭಟ್, ಕೆನರಾ ಕಾಲೇಜು ಕರೆಸ್ಪಾಂಡೆಂಟ್ ಮಾರೂರು ಸುಧೀರ್ ಪೈ, ಮುಕ್ತಾ ಅಧ್ಯಕ್ಷೆ ಡಾ. ಆಶಲತಾ ಎಸ್. ಸುವರ್ಣ, ವಾಣಿಜ್ಯ ವಿಭಾಗದ ಪ್ರೊ. ದೇಜಮ್ಮ ಎ., ಪ್ರೊ. ಸೀಮಾ ಪ್ರಭು ಎಸ್. ಮತ್ತಿತರರು ಉಪಸ್ಥಿತರಿದ್ದರು.

ಕಾಲೇಜು ಪ್ರಾಂಶುಪಾಲೆ ಡಾ. ಮಾಲಿನಿ ಕೆ.ವಿ. ಸ್ವಾಗತಿಸಿದರು. ಸುಷ್ಮಾ ಆರ್. ಶೆಟ್ಟಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News