×
Ad

ಮಾ. 4ರಂದು ಸುಳ್ಯದಲ್ಲಿ ಸಾಹಿತಿ ಲಕ್ಷ್ಮೀಶ ಚೊಕ್ಕಾಡಿ ಅಧ್ಯಕ್ಷೆತೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Update: 2017-03-02 18:58 IST

ಸುಳ್ಯ, ಮಾ.2:  ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾ.4ರಂದು ಸಮ್ಮೇಳನಾಧ್ಯಕ್ಷ ಸಾಹಿತಿ ಲಕ್ಷ್ಮೀಶ ಚೊಕ್ಕಾಡಿ ಅಧ್ಯಕ್ಷತೆಯಲ್ಲಿ ಸುಳ್ಯದ ಯುವಜನ ಸಂಯುಕ್ತ ಮಂಡಳಿ ರಂಗಮಂದಿರದಲ್ಲಿ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ವೇದಿಕೆ, ಚೇತನ್‌ರಾಂ ಇರಂತಕಜೆ ಸಭಾಂಗಣದಲ್ಲಿ ನಡೆಯಲಿದೆ ಎಂದು ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ಡಾಹರಪ್ರಸಾದ್ ತುದಿಯಡ್ಕ ಅವರು ತಿಳಿಸಿದರು.

  ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೂರ್ವಾಹ್ನ 9 ಗಂಟೆಯಿಂದ ಲಾಲ್‌ಬಹದ್ದೂರ್ ಶಾಸ್ತ್ರಿವೃತ್ತದಿಂದ ಕನ್ನಡ ಭುವನೇಶ್ವರಿ ಮೆರವಣಿಗೆ ಪ್ರಾರಂಭವಾಗಲಿದ್ದು, ಸುಳ್ಯ ತಹಶೀಲ್ದಾರ್ ಎಂ.ಎಂ.ಗಣೇಶ ಚಾಲನೆ ನೀಡಲಿದ್ದಾರೆ.

ರಾಷ್ಟ್ರ ಧ್ವಜವನ್ನು ನ.ಪಂ.ಅಧ್ಯಕ್ಷೆ ಶೀಲಾವತಿ ಮಾಧವ ಅವರು, ಪರಿಷತ್ತಿನ ಧ್ವಜವನ್ನು ಕ.ಸಾ.ಪ. ಜಿಲ್ಲಾ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಅವರು , ಕನ್ನಡ ಧ್ವಜವನ್ನು ತಾಲೂಕು ಅಧ್ಯಕ್ಷ ಡಾ ಹರಪ್ರಸಾದ್ ತುದಿಯಡ್ಕ ಆರೋಹಣಗೈಯ್ಯಲಿದ್ದಾರೆ. ಬಳಿಕ ಪುಸ್ತಕ ಮತ್ತು ವಸ್ತುಪ್ರದರ್ಶನವನ್ನು ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟಿಸಲಿದ್ದಾರೆ. ಸಮಾರಂಭವನ್ನು ಶಾಸಕ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ.

 ವ್ಯಂಗ್ಯ ಚಿತ್ರಕಾರ ದಿನೇಶ ಕುಕ್ಕುಜಡ್ಕ ಅವರ ವ್ಯಂಗ್ಯ ಚಿತ್ರ ಪ್ರದರ್ಶನ, ತಾಲೂಕು ಮುಗೇರ ಸಂಘದ ವತಿಯಿಂದ ದುಡಿ ಮತ್ತು ಇತರ ವಸ್ತು ಪ್ರದರ್ಶನ ನಡೆಯಲಿದೆ. ಸ್ಮರಣ ಸಂಚಿಕೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಜಾಕೆ ಮಾಧವ ಗೌಡ ಅನಾವರಣಗೊಳಿಸಲಿದ್ದಾರೆ. ಹೊಸ ಕೃತಿಗಳನ್ನು ರಾಧಾಕೃಷ್ಣ ಕಲ್ಚಾರ್ ಅವರು ಬಿಡುಗಡೆಗೊಳಿಸಲಿದ್ದಾರೆ.

 ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಮಾತನಾಡಲಿದ್ದಾರೆ. ಸಮ್ಮೇಳನದ ಆಶಯ ನುಡಿಯನ್ನು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ಅವರು ನೆರವೇರಿಸಲಿದ್ದಾರೆ.ತಾಲೂಕು ಅಧ್ಯಕ್ಷ ಡಾ ಹರಪ್ರಸಾದ್‌ತುದಿಯಡ್ಕ ಪ್ರಸ್ತಾವನೆಗೈಯ್ಯಲಿದ್ದಾರೆ. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ನಂತರ ವಿಚಾರಗೋಷ್ಠಿ ನಡೆಯಲಿದೆ. ಅಧ್ಯಕ್ಷತೆಯನ್ನು ಡಾ ವರದರಾಜ ಚಂದ್ರಗಿರಿ ವಹಿಸಲಿದ್ದಾರೆ.

ಉಪನ್ಯಾಸಕ ಡಾಪೂವಪ್ಪ ಕಣಿಯೂರು ಸಮ್ಮೇಳನಾಧ್ಯಕ್ಷರ ಸಾಹಿತ್ಯ ಕೃತಿಗಳ ವಿಮರ್ಶೆ ಬಗ್ಗೆ ಮತ್ತು ಪ್ರಸೂತಿ ತಜ್ಞೆ ಡಾ ವೀಣಾ ಹಿರಿಯ ಸಾಹಿತಿಗೆ ಶತ ನಮನ ಕನ್ನಡದ ಆಸ್ತಿ ಮಾಸ್ತಿ ಬಗ್ಗೆ ವಿಚಾರ ಮಂಡಿಸಲಿದ್ದಾರೆ.

ಕವಿಗೋಷ್ಠಿ:

 ಕವಿಯತ್ರಿ ಸ್ಮಿತಾ ಅಮೃತರಾಜ್‌ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ವಿಮಲಾರುಣ ಪಡ್ಡಂಬೈಲು, ಹೇಮಲತಾ ಗಣೇಶ್, ಕುಸುಮಾವತಿ ಕುಕ್ಕೇಟಿ, ಜಾಹ್ನವಿ ಕಾಂಚೋಡು, ಯೋಗೀಶ್ ಹೊಸೊಳಿಕೆ,ದೇವಿಪ್ರಸಾದ್ ಜಿ.ಸಿ.ಕವನವಾಚನ ಮಾಡಲಿದ್ದಾರೆ.ಅಪರಾಹ್ನ ಕನ್ನಡ ಕಸ್ತೂರಿ ಸನ್ಮಾನ ಮತ್ತು ಸಮಾರೋಪ ನಡೆಯಲಿದೆ.

ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವಿಮರ್ಶಕ ಎಸ್.ಆರ್.ವಿಜಯಶಂಕರ ಸಮಾರೋಪ ಭಾಷಣ ಮಾಡಲಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ ಕೆ.ವಿ.ಚಿದಾನಂದ ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಕ್ಕೆಶ್ರೀಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಭಾಗವಹಿಸಲಿದ್ದಾರೆ.

ಕನ್ನಡ ಕಸ್ತೂರಿ ಸಮ್ಮಾನ:

ಗುಲಾಬಿ ಅಜಲ್ತಿ ಬಾಳಿಲ (ಪಾಡ್ದನ), ಹರಿಹರ ಬಾಯಾಡಿ (ಸಂಗೀತ ಕ್ಷೇತ್ರ) ಕೃ.ಶಾ.ಮರ್ಕಂಜ(ಸಾಹಿತ್ಯ), ದಿನೇಶ್ ಕುಕ್ಕುಜಡ್ಕ (ವ್ಯಂಗ್ಯ ಚಿತ್ರಕಲೆ), ಗಂಗಾಧರ ಕಲ್ಲಪ್ಪಳ್ಳಿ ( ಪತ್ರಿಕೋದ್ಯಮ), ನಾರಾಯಣ ಪಾಟಾಳಿ( ನಾಟಿ ಪಶು ವೈದ್ಯಕೀಯ), ನಂದರಾಜ ಸಂಕೇಶ್( ನಟನೆ, ಸಾಂಸ್ಕೃತಿಕ ಸಂಘಟನೆ),ನೀರಬಿದಿರೆ ನಾರಾಯಣ (ಸಾಹಿತ್ಯ), ಕೆ.ಎನ್.ದೇವಿಪ್ರಸಾದ್(ಪರಿಸರ ಅಧ್ಯಯನ-ಕೃತಿ ರಚನೆ) ಅವರಿಗೆ ಕನ್ನಡ ಕಸ್ತೂರಿ ಸಮ್ಮಾನ ಮತ್ತು ತುಷಾರ (ನಟನೆ), ಧೃತಿ ಮುಂಡೋಡಿ (ವಿಜ್ಞಾನ ಆವಿಷ್ಕಾರ) ಅವರಿಗೆ ಬಾಲ ಪುರಸ್ಕಾರ ನೀಡಲಾಗುವುದು.

ಸಾಂಸ್ಕೃತಿಕ ಸಂಭ್ರಮ:

ಜೆ ಗಂಟೆ 6.30ರಿಂದ ಬಿ.ವಿ.ರಾಜಾರಾಂ ನಿರ್ದೇಶನದ ರಂಗ ನಾಟಕ ಮೈಸೂರು ಮಲ್ಲಿಗೆ ಪ್ರದರ್ಶನಗೊಳ್ಳಲಿದೆ ಎಂದರು.

ಗೋಷ್ಠಿಯಲ್ಲಿಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೆ.ವಿ.ಹೇಮನಾಥ, ಕ.ಸಾ.ಪ.ಗೌರವ ಕಾರ್ಯದರ್ಶಿಗಳಾದ ಚಂದ್ರಶೇಖರ ಪೇರಾಲು ಮತ್ತು ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾನಂದ ಆಳ್ವ, ಸದಸ್ಯೆ ಗಿರಿಜಾ ಎಂ.ವಿ., ಸಮ್ಮೇಳನದ ಆರ್ಥಿಕ ಸಮಿತಿ ಸಂಚಾಲಕ ಸಿಎ ಗಣೇಶ್ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News