×
Ad

ಉಳ್ಳಾಲ: ಮಾರ್ಚ್ 5ರಂದು ರೀಜನಲ್ ಸಂಗಮ -2016- 17 ಕಾರ್ಯಕ್ರಮ

Update: 2017-03-02 19:29 IST

ಉಳ್ಳಾಲ, ಮಾ.2: ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಇದರ ಮಂಜೇಶ್ವರ-ಉಪ್ಪಳದ ರೀಜನಲ್ ಸಂಗಮ -2016- 17 ಕಾರ್ಯಕ್ರಮ ಮಾ.5ರಂದು ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಆಶ್ರಮ ವಾಸಿ 10 ಮಂದಿಗೆ ಗಾಲಿ ಕುರ್ಚಿ, ಸ್ಟ್ರೆಚರ್ ವಿತರಣೆ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ ನಡೆಯಲಿದೆ ಎಂದು ಮಂಜೇಶ್ವರ- ಉಪ್ಪಳದ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲಕ್ಷ್ಣಣ್ ಕುಂಬ್ಲೆ ತಿಳಿಸಿದ್ದಾರೆ.

ತೊಕ್ಕೊಟ್ಟು ಖಾಸಗಿ ಹೊಟೇಲಿನಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಂಜೇಶ್ವರ-ಉಪ್ಪಳ ಭಾಗದ ಲಯನ್ಸ್ ಕ್ಲಬ್ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.ಲಯನ್ಸ್ ಕ್ಲಬ್‌ಗೆ ಶತಮಾನದ ಅಂಗವಾಗಿ ವಿವಿದೆಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಾ.5 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ. ಡಾ.ಅಮೃತ ಸೋಮೇಶ್ವರ, ಸಮಾಜ ಸೇವಕ ಗೋಪಾಲಕೃಷ್ಣ ( ಸಾಯಿರಾಂ ) ಭಟ್, ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲೆ ಕವಿತಾ ಶಾಸ್ತ್ರಿ ಹಾಗೂ ಲಯನ್ಸ್ ಜಿಲ್ಲಾ ಗವರ್ನರ್ ಸಿ.ಎ.ಶಿವಪ್ರಸಾದ್ಕೆ ಇವರಿಗೆ ಸನ್ಮಾನ ನಡೆಯಲಿದೆ.
  
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣ್ಣೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಕೆ.ಅಬ್ದುಲ್ ಖಾದರ್ ಮಾಂಗಡ್ ಹಾಗೂ ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ನ ಮುಖ್ಯಸ್ಥ ವಿ.ಅಮರನಾಥ್ ಭಾಗವಹಿಸಲಿದ್ದಾರೆ.

ಇದೇ ಸಂದರ್ಭ ನಿಮಿಷಾ ನಾಯರ್ ಇವರಿಂದ ಕೂಚುಪುಡಿ ನೃತ್ಯ, ತುಳುನಾಡ ರತ್ನ ದಿನೇಶ್ ಅತ್ತಾವರ ಇವರಿಂದ ನೃತ್ಯ ಹಾಗೂ ಪ್ರಕಾಶ ಮಹದೇವನ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಸುದ್ಧಿಗೋಷ್ಠಿಯಲ್ಲಿ ರಾಜೇಶ್ ಶೆಟ್ಟಿ, ಮೋಹನ್.ಕೆ, ಪ್ರವೀಣ್ ಪಕ್ಕಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News