×
Ad

ಕಾಸರಗೋಡು: ಪೊಲೀಸ್ ದೌರ್ಜನ್ಯ ಖಂಡಿಸಿ ಎಂಎಸ್ಎಫ್ ನಿಂದ ವೃತ್ತ ನಿರೀಕ್ಷಕರ ಕಚೇರಿಗೆ ಮುತ್ತಿಗೆ

Update: 2017-03-02 20:18 IST

ಕಾಸರಗೋಡು : ಕಾಸರಗೋಡು ಸರಕಾರಿ  ಕಾಲೇಜಿನಲ್ಲಿ  ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರ ನಡುವಿನ ಘರ್ಷಣೆಗೆ ಸಂಬಂಧಪಟ್ಟಂತೆ  ಎಂಎಸ್ಎಫ್  ಕಾರ್ಯಕರ್ತನ ಮೇಲೆ  ದೌರ್ಜನ್ಯ ನಡೆಸಿದ ಪೊಲೀಸರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಎಂಎಸ್ಎಫ್  ಮತ್ತು ಯೂತ್ ಲೀಗ್ ಕಾಸರಗೋಡು  ವೃತ್ತ ನಿರೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಿತು.

ಹೊಸ ನಿಲ್ದಾಣ ಪರಿಸರದಿಂದ  ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರನ್ನು ಠಾಣೆ ಯ  ಮುಂಭಾಗದಲ್ಲಿ ಪೊಲೀಸರು ತಡೆದರು ಈ ಸಂದರ್ಭದಲ್ಲಿ ನೂಕು ತಳ್ಳಾಟ ನಡೆಯಿತು.

ಬಳಿಕ ನಡೆದ ಪ್ರತಿಭಟನೆಯನ್ನು  ಯೂತ್ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ  ಪಿ. ಕೆ ಫಿರೋಜ್ ಉದ್ಘಾಟಿಸಿದರು. ತಪ್ಪಿತಸ್ಥ  ಪೊಲೀಸರ ವಿರುದ್ಧ ಕ್ರಮ ತೆಗೆದು ಕೊಳ್ಳದಿದ್ದಲ್ಲಿ ಹೋರಾಟದಿಂದ ಹಿಂದೆ  ಸರಿಯುವುದಿಲ್ಲ ಎಂದು  ಮುನ್ನೆಚ್ಚರಿಕೆ ನೀಡಿದರು.

ಅಶ್ರಫ್ ಎಡನೀರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಸಿ.ಟಿ ಆಹಮ್ಮದಾಲಿ,  ಟಿ.ಇ ಅಬ್ದುಲ್ಲ, ಎ.ಜಿ.ಸಿ ಬಷೀರ್, ಎ.ಕೆ.ಎಂ  ಅಶ್ರಫ್, ಕೆ.ಎ ಇಕ್ಬಾಲ್ , ಅಬ್ದುಲ್ಲ ಕು೦ಞ    ಚೆರ್ಕಳ, ಕೆ.ಬಿ.ಎಂ ಷರೀಫ್,  ಟಿ.ಡಿ  ಕಬೀರ್ ಹಾಶಿಮ್ ಬಂಬ್ರಾಣಿ ಮೊದಲಾದವರು  ಉಪಸ್ಥಿತರಿದ್ದರು.

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಎರಡು ದಿನಗಳ   ನಡೆದ ಎಸ್ಎಫ್ಐ ಮತ್ತು ಎಂಎಸ್ಎಫ್ ವಿದ್ಯಾರ್ಥಿ ಸಂಘಟನೆಗಳ  ನಡುವಿನ ಘರ್ಷಣೆ  ಹಿನ್ನಲೆಯಲ್ಲಿ  ಎಂಎಸ್ ಎಫ್ ಕಾರ್ಯಕರ್ತರು ಕಾಸರಗೋಡು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.

ಈ ಸಂದರ್ಭದಲ್ಲಿ ನಾಲ್ವರು ಎಂಎಸ್ಎಫ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಈ ಪೈಕಿ  ಜಿಲ್ಲಾಧ್ಯಕ್ಷ ಆಬಿದ್  ಮತ್ತು ಮಂಡಲ ಅಧ್ಯಕ್ಷ ಅನಾಸ್ ಮೇಲೆ ಪೊಲೀಸ್ ಠಾಣೆ ಯಲ್ಲಿ ದೌರ್ಜನ್ಯ ನಡೆಸಲಾಗಿತ್ತು. ಈ ಹಿನ್ನಲೆಯಲ್ಲಿ  ವೃತ್ತ ನಿರೀಕ್ಷಕ ಸಿ . ಎ ಅಬ್ದುಲ್  ರಹಿಮಾನ್ ಮತ್ತು ಎಎಸ್ಐ  ಸತೀಶ್ ರವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿತ್ತು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News