×
Ad

ಫಾ.ಟಾಮ್ ರಕ್ಷಣೆಗೆ ತ್ವರಿತ ಕ್ರಮಕ್ಕೆ ಕೇಂದ್ರಕ್ಕೆ ಕೇರಳ ಆಗ್ರಹ

Update: 2017-03-02 20:51 IST

ತಿರುವನಂತಪುರ,ಮಾ.2: 2016, ಮಾರ್ಚ್‌ನಲ್ಲಿ ಯುದ್ಧಗ್ರಸ್ತ ಯೆಮೆನ್‌ನಲ್ಲಿ ಐಸಿಸ್ ಭಯೋತ್ಪಾದಕರಿಂದ ಅಪಹೃತರಾಗಿರುವ ಕೇರಳದ ಕ್ರೈಸ್ತ ಧರ್ಮಗುರು ಟಾಮ್ ಉಳುನ್ನಲಿಲ್ ಅವರ ರಕ್ಷಣೆಗೆ ಪ್ರಯತ್ನಗಳನ್ನು ತ್ವರಿತಗೊಳಿಸುವಂತೆ ರಾಜ್ಯ ಸರಕಾರವು ಕೇಂದ್ರವನ್ನು ಆಗ್ರಹಿಸಿದೆ.

ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾನೂನು ಸಚಿವ ಎ.ಕೆ.ಬಾಲನ್ ಅವರು ಈ ವಿಷಯವನ್ನು ತಿಳಿಸಿದರು. ಫಾಟಾಮ್ ಕೊಟ್ಟಾಯಂ ಜಿಲ್ಲೆಯ ರಾಮಾಪುರಂ ನಿವಾಸಿ ಯಾಗಿದ್ದಾರೆ.

ಫಾ.ಟಾಮ್ ಅವರು ಭಯೋತ್ಪಾದಕರ ವಶದಲ್ಲಿರುವುದು ದೃಢಪಟ್ಟಿದೆ. ಆದರೆ ಅವರನ್ನು ಎಲ್ಲಿ ಇಡಲಾಗಿದೆ ಎಂಬ ಬಗ್ಗೆ ಯಾವುದೇ ವಾಹಿತಿಯಿಲ್ಲ ಎಂದು ಬಾಲನ್ ಹೇಳಿದರು.

ಫಾ.ಟಾಮ್ ಅವರನ್ನು 2016,ಮಾ.4ರಂದು ಐಸಿಸ್ ಭಯೋತ್ಪಾದಕರು ಅಪಹರಿ ಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News