ಮಾ.4ರಂದು ಕರಾವಳಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಹಬ್ಬ 'ಕೈಜನ್-2017'
ಮಂಗಳೂರು, ಮಾ. 2: ನಗರದ ಕರಾವಳಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಹಬ್ಬ ಕೈಜನ್-2017 ಸ್ಪರ್ಧೆಯು ಮಾ.4ರಂದು ಬೆಳಗ್ಗೆ 9:30ಕ್ಕೆ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ಚಿತ್ರ ನಟ ಸಂದೀಪ್ ಶೆಟ್ಟಿ ಹಾಗೂ 2016ನೆ ಸಾಲಿನ ಬಿಎಸ್ಸಿ ಫ್ಯಾಶನ್ ಡಿಸೈನಿಂಗ್‌ನಲ್ಲಿ ದ್ವಿತೀಯ ರ್ಯಾಂಕ್ ಪಡೆದ ಲಿಜಿ ಕೆ. ಓಮಾನ್ ಅವರು ಜಂಟಿಯಾಗಿ ಉದ್ಘಾಟಿಸಲಿದ್ದಾರೆ.
ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್.ಎಜ್ಯುಕೇಶನ್ ಟ್ರಸ್ಟ್‌ನ. ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಹಾಗೂ ಕಾಲೇಜಿನ ನಿರ್ದೇಶಕಿ ಲತಾ ಜಿ. ರಾವ್ ಮುಖ್ಯ ಅತಿಥಿಯಾಗಿ ಭಾಗವಸಲಿರುವರು.
ಸ್ಪರ್ಧೆಯಲ್ಲಿ ಕ್ಲಾಸಿಕಲ್ ಡ್ಯಾನ್ಸ್, ಕ್ಯಾರಿಕೇಚರ್, ಕೊಲ್ಲಾಜ್ ಮೇಕಿಂಗ್, ಕುಕ್ಕಿಂಗ್ ವಿದೌಟ್ ಫೈರ್, ಫೇಸ್ ಪೈಂಟಿಂಗ್, ಫ್ಲವರ್ ಅರೇಂಜ್‌ಮೆಂಟ್, ಫೋಕ್ ಗ್ರೂಪ್ ಡ್ಯಾನ್ಸ್, ಗ್ರೂಪ್ ಸಿಂಗಿಂಗ್, ಹೇರ್ ಸ್ಟೈಲಿಂಗ್, ಮೆಹೆಂದಿ, ಫಾಸ್ಟ್ ಪೈಂಟಿಂಗ್, ಫೋಟೋಗ್ರಾಫಿ, ರಂಗೋಲಿ, ಪೇಪರ್ ಪ್ರೆಸೆಂಟೇಶನ್, ಫ್ಯಾಶನ್ ಶೋ, ವೆಸ್ಟರ್ನ್ ಗ್ರೂಪ್ ಡ್ಯಾನ್ಸ್, ಬೆಸ್ಟ್ ಆಫ್ ವೇಷ್ಟ್, ಚಾರ್‌ಕೋಲ್ ಸ್ಕೆಚ್ಚಿಂಗ್, ಇತ್ಯಾದಿ ಷಯಗಳಲ್ಲಿ ನಡೆಯಲಿದೆ.
ವಿದ್ಯಾರ್ಥಿಗಳಲ್ಲಿ ಸ್ಪರ್ಧಾಮನೋಭಾವ, ಮತ್ತು ಆತ್ಮಸ್ಥೈರ್ಯವನ್ನು ಮೂಡಿಸುವ ನಿಟ್ಟಿನಲ್ಲಿ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸವಾಲುಗಳನ್ನು ದಿಟ್ಟವಾಗಿ ಎದುರಿಸಬಲ್ಲ ಸಾಮರ್ಥ್ಯವನ್ನು ಹೆಚ್ಚಿಸುವುದೇ ಈ ಸಾಂಸ್ಕೃತಿಕ ಸ್ಪರ್ಧೆಯ ಉದ್ದೇಶವಾಗಿದೆ ಎಂದು ಪ್ರಕಟನೆ ತಿಳಿಸಿದೆ.