×
Ad

ಮಂಗಳೂರು: ಮಾ.3ರಿಂದ ತೋಡಾರು ಉರೂಸ್

Update: 2017-03-02 22:05 IST

ಮಂಗಳೂರು, ಮಾ. 3: ಸಯ್ಯದ್ ವಲಿಯುಲ್ಲಾಹ್ ಹೆಸರಿನಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುವ ಉರೂಸ್ ಸಮಾರಂಭ ಹಾಗೂ ಧಾರ್ಮಿಕ ಕಾರ್ಯಕ್ರಮವು ಈ ಬಾರಿ ಮಾ.3ರಿಂದ 11ರವರೆಗೆ ತೋಡಾರು ಮುದರ್ರಿಸ್ ಅಬ್ದುಲ್ ಸಲೀಂ ಫೈಝಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.

 ಮಾ.3ರಂದು ಅಸರ್ ನಮಾಝಿನ ಬಳಿಕ ನಡೆಯುವ ಸ್ವಲಾತ್ ವಾರ್ಷಿಕದ ನೇತೃತ್ವವನ್ನು ಆತ್ರಾಡಿ ಖಾಝಿ ಶೈಖುನಾ ವಿ.ಕೆ.ಅಬೂಬಕರ್ ಮುಸ್ಲಿಯಾರ್ ವಹಿಸಲಿದ್ದಾರೆ. ತೋಡಾರು ಮುದರ್ರಿಸ್ ಅಬ್ದುಲ್ ಸಲೀಂ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪ್ರತಿದಿನ ಸಂಜೆ 7 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ಖಾಸಿಂ ದಾರಿಮಿ ಕಿನ್ಯ, ಅಮೀರ್ ಅರ್ಶದಿ ಕರುವೇಲು, ಮಹಮೂನ್ ಹುದವಿ ವಂಡೂರು, ಮುನೀರ್ ಹುದವಿ ವಿಳಂಯಿಲ್, ಅಶ್ರಫ್ ರಹ್ಮಾನಿ ಚೌಕಿ, ಸಯ್ಯದ್ ಎನ್‌ಪಿಎಂ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ, ಅಬೂಬಕರ್ ಸಿದ್ದೀಕ್ ಅಝ್ಹರಿ ಪಯ್ಯನ್ನೂರ್, ರಹ್ಮತುಲ್ಲಾಹ್ ಖಾಸಿಂ ಮುತ್ತೇಡಂ ಭಾಗವಹಿಸಲಿದ್ದಾರೆ. ಮಾ. 11ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News