ಈಜಿಪ್ಟ್‌ನ ಮಾಜಿ ಅಧ್ಯಕ್ಷ ಹೊಸ್ನಿ ಮುಬಾರಕ್ ಖುಲಾಸೆ
Update: 2017-03-02 22:41 IST
ಕೈರೊ, ಮಾ.2: 2011ರಲ್ಲಿ ನಡೆದ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರನ್ನು ಹತ್ಯೆ ಮಾಡಿದ ಆರೋಪದಿಂದ ಈಜಿಪ್ಟ್‌ನ ಮಾಜಿ ಅಧ್ಯಕ್ಷ ಹೊಸ್ನಿ ಮುಬಾರಕ್ ಅವರನ್ನು ಕೈರೊದ ನ್ಯಾಯಾಲಯ ಖುಲಾಸೆಗೊಳಿಸಿದೆ.
ಮುಬಾರಕ್, ಅವರ ಸರಕಾರದಲ್ಲಿ ಒಳಾಡಳಿತ ಸಚಿವರಾಗಿದ್ದವರೂ ಸೇರಿದಂತೆ ಆರು ಮಂದಿ ಬೆಂಬಲಿಗರಿಗೆ 2012ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ಈ ತೀರ್ಪಿನಲ್ಲಿ ಕೆಲವೊಂದು ತಾಂತ್ರಿಕ ದೋಷಗಳಿವೆ ಎಂದು ತಿಳಿಸಿದ್ದ ಮತ್ತೊಂದು ನ್ಯಾಯಾಲಯವು, ಎರಡು ವರ್ಷದ ಬಳಿಕ ಈ ತೀರ್ಪನ್ನು ಅನೂರ್ಜಿತಗೊಳಿಸಿತ್ತು. ತೀವ್ರ ಅಸ್ವಸ್ಥರಾಗಿರುವ 88ರ ಹರೆಯದ ಮುಬಾರಕ್‌ಗೆ ಮತ್ತೊಂದು ಭ್ರಷ್ಟಾಚಾರ ಪ್ರಕರಣದಲ್ಲಿ ಮೂರು ವರ್ಷದ ಶಿಕ್ಷೆ ವಿಧಿಸಲಾಗಿದ್ದು ಕೈರೊದ ಸೇನಾ ಆಸ್ಪತ್ರೆಯಲ್ಲಿ ಅವರನ್ನು ಇರಿಸಲಾಗಿದೆ.