ಪಡುಬಿದ್ರಿ: ನೇಣು ಬಿಗಿದು ಆತ್ಮಹತ್ಯೆ
Update: 2017-03-02 23:13 IST
ಪಡುಬಿದ್ರಿ, ಮಾ.2: ಪತ್ನಿಯ ಅನಾರೋಗ್ಯದಿಂದ ಚಿಂತಿತರಾಗಿ ವಿಪರೀತ ಮದ್ಯಪಾನ ಮಾಡುತಿದ್ದ ವ್ಯಕ್ತಿಯೊಬ್ಬರು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಹಿಂಬದಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಲಿಮಾರು ಗ್ರಾಮದ ಚರ್ಚ್ ರಸ್ತೆಯ ಮನೆಯಲ್ಲಿ ನಡೆದಿದೆ.
ಮೃತರನ್ನು ರಮಾನಂದ ಎಂ. ಬಂಗೇರ (49) ಎಂದು ಗುರುತಿಸಲಾಗಿದೆ.
ಇವರ ಪತ್ನಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಇದರಿಂದ ಬೇಸತ್ತ ಅವರು ನಿನೆ ರಾತ್ರಿ 8:00 ಗಂಟೆಯಿಂದ ಗುರುವಾರ ಬೆಳಗ್ಗೆ 7 ಗಂಟೆಯವ ನಡುವಿನ ಅವಧಿಯಲ್ಲಿ ಯುಪಿಸಿಎಲ್ ಕಾರ್ಗೋಗೇಟ್ ಬಳಿ ಇರುವ ತನ್ನ ಅಣ್ಣನ ಮನೆಯ ಹಿಂಬದಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.