ಬೈಂದೂರು: ಯುವಕ ನಾಪತ್ತೆ
Update: 2017-03-02 23:15 IST
ಬೈಂದೂರು, ಮಾ.2: ಮಂಗಳೂರಿಗೆ ಹೋಗಿ ಬರುತ್ತೇನೆ ಎಂದು ಎಂದು ಫೆ.25ರಂದು ಮನೆಯಿಂದ ತೆರಳಿದ್ದ 24ರ ಹರೆಯದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ ಎಂದು ಯುವಕನ ತಾಯಿ ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿರೂರು ಗ್ರಾಮದ ಬುಕಾರಿ ಕಾಲೋನಿಯ ನಿವಾಸಿ ಜೈನುಲ್ಲಾಬೀದ್ದಿನ್ ಎಂಬವರ ಪತ್ನಿ ಶಹರಾಬಾನು ಅವರು ತನ್ನ ಮಗ ಸಮೀರ್ (24) ಫೆ.25ರಂದು ಮಂಗಳೂರಿಗೆಂದು ತೆರಳಿದವನು ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದಾರೆ.
ಸುಮಾರು ಒಂದು ವರ್ಷದಿಂದ ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡುತಿದ್ದ ಸಮೀರ್, ಅಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿಗೆ ತೆರಳಿದ ಬಳಿಕ ಮನೆಗೆ ಬಾರದೇ, ದೂರವಾಣಿ ಕರೆಗೂ ಸಿಗದೇ ಕಾಣೆಯಾಗಿದ್ದು, ಆತನ ಮೊಬೈಲ್ ಸ್ವಿಚ್‌ಆಫ್ ಬರುತ್ತಿದೆ. ತಾವು ಸಂಬಂಧಿಕರ ಮನೆ ಹಾಗೂ ಇತರ ಅನೇಕ ಕಡೆಗಳಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.