×
Ad

ಸೂಟರ್‌ಪೇಟೆ: ಸಾಕ್ಷಚಿತ್ರ ಬಿಡುಗಡೆ

Update: 2017-03-02 23:55 IST

ಮಂಗಳೂರು, ಮಾ.2: ಸೂಟರ್ ಪೇಟೆ ಕೋರ್ದಬ್ಬು ದೈವಸ್ಥಾನದ ಸಾಕ್ಷ ಚಿತ್ರದ ಬಿಡುಗಡೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುರುವಾರ ನೆರವೇರಿಸಿ ಶುಭ ಹಾರೈಸಿದರು.

ಕ್ರೀಡಾ ಅಂಕಣಕಾರ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಸಂಯೋಜನೆಯಲ್ಲಿ ಮೂಡಿ ಬಂದ ಈ ಸಾಕ್ಷ್ಯಚಿತ್ರದ ಸಂಕಲನವನ್ನು ವೆಂಕಟೇಶ್ ನಾಯಕ್ ಇಂದಾಜೆ ಮಾಡಿದ್ದಾರೆ. ಹೇಮ ಜಯರಾಮ್ ಪುತ್ತೂರು ನಿರೂಪಣೆ ಮಾಡಿದ್ದಾರೆ.

ಈ ಸಂದರ್ಭ ದೈವಸ್ಥಾನದ ಗುರಿಕಾರ ಎಸ್.ರಾಘವೇಂದ್ರ, ಕಾರ್ಪೊರೇಟರ್ ಅಪ್ಪಿ.ಎಸ್, ಗೌರವ ಸಲಹೆಗಾರ ಕೆ.ಪಾಂಡುರಂಗ, ಪ್ರಧಾನ ಕಾರ್ಯದರ್ಶಿ ಎಸ್.ಜಗದೀಶ್ಚಂದ್ರ ಅಂಚನ್, ಕೋಶಾಧಿಕಾರಿ ನವೀನ್.ಎಸ್, ಸದಸ್ಯರಾದ ಸುದೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News