ಮಾ.6-16: ಕೂಟು ಝಿಯಾರತ್
ಮಂಗಳೂರು, ಮಾ.2: ತಾಲೂಕಿನ ಕಿನ್ಯ ಗ್ರಾಮದ ಕೇಂದ್ರ ಜುಮಾ ಮಸೀದಿಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ವಲಿಯುಲ್ಲಾಹಿ ಹುಸೇನ್ ಮುಸ್ಲಿಯಾರ್ ಅವರ ದರ್ಗಾದಲ್ಲಿ ವರ್ಷಂಪ್ರತಿ ನಡೆಸಲಾಗುವ ಕೂಟು ಝಿಯಾರತ್ ಮಾ. 6ರಿಂದ 16ರವರೆಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಸಾಲಿ ಹಾಜಿ ಕುರಿಯಕ್ಕಾರ್, ಕಾರ್ಯಕ್ರಮದ ಪ್ರಯುಕ್ತ ಧಾರ್ಮಿಕ ಉಪನ್ಯಾಸವನ್ನು ಮಾ.6ರಂದು ಕುಂಬೋಳ್ ಸೈಯದ್ ಆಟಕ್ಕೋಯ ತಂಙಳ್ ಉದ್ಘಾಟಿಸಲಿದ್ದಾರೆ ಎಂದರು. ಸೈಯದ್ ಅಮೀರ್ ತಂಙಳ್ ಕಿನ್ಯಾ ದುಆ ನೆರವೇರಿಸಲಿದ್ದು, ಕಿನ್ಯಾ ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಬೂಬಕರ್ ಅಲ್ ಖಾಸಿಮಿ ಮುಖ್ಯ ಭಾಷಣ ಮಾಡಲಿದ್ದಾರೆ. ಮಾ.7ರಂದು ಪಿಎ ಅಬ್ದುಲ್ ಬಾರಿ ಸಅದಿ, 8ರಂದು ಅಬ್ದುಸ್ಸಲಾಂ ವಾಫಿ ಮಲ್ಪಪುರಂ, 9ರಂದು ಪಿಎ ಅಹ್ಮದ್ ಬಾಖವಿ, 10ರಂದು ಖಾಸಿಂ ದಾರಿಮಿ, 11ರಂದು ಉಡುಪಿ ಖಾಝಿ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್, 12ರಂದು ಉಸ್ಮಾನ್ ಜೌಹರಿ, 13ರಂದು ರಫೀಕ್ ಸಅದಿ ದೇಲಂಪಾಡಿ, 14ರಂದು ಅಶ್ರಫ್ ರಹ್ಮಾನಿ ಚೌಕಿ, 15ರಂದು ಹಸನ್ ಸಖಾಫಿ ಪೂಕಟ್ಟೂರು ಧಾರ್ಮಿಕ ಉಪನ್ಯಾಸ ನೀಡಲಿರುವರು. ಸಮಾರೋಪ ಹಾಗೂ ಕೂಟು ಝಿಯಾರತ್ ಕಾರ್ಯಕ್ರಮ ಮಾ.16ರಂದು ನಡೆಯಲಿದೆ. ನೇತೃತ್ವವನ್ನು ಮಂಗಳೂರು ಖಾಝಿ ತಾಖಾ ಅಹ್ಮದ್ ಮುಸ್ಲಿಯಾರ್ ವಹಿಸಲಿದ್ದು, ಸೈಯದ್ ಅಮೀರ್ ತಂಙಳ್ ದುಆ ನೆರವೇರಿಸುವರು. ನ್ಯಾಯವಾದಿ ಹನೀಫ್ ಹುದವಿ ಮಾಡನ್ನೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಕಿನ್ಯಾ ಕೇಂದ್ರ ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಬಿ.ಇಸ್ಮಾಯೀಲ್, ಕೂಟು ಝಿಯಾರತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಕಾರ್ಯದರ್ಶಿ ಫಾರೂಕ್ ಕಿನ್ಯಾ, ಬಿ.ಎಂ.ಕುಂಞಿ ಮೋನು ಹಾಜಿ ಮತ್ತಿತರರು ಉಪಸ್ಥಿತರಿದ್ದರು.