×
Ad

ಮಾ.16ಕ್ಕೆ ಕೇಂದ್ರಸರಕಾರಿ ನೌಕರರ ಮುಷ್ಕರ

Update: 2017-03-03 12:43 IST

ಕೊಚ್ಚಿ,ಮಾ. 3: ಕೇಂದ್ರಸರಕಾರ ಭರವಸೆ ನೀಡಿ ಉಲ್ಲಂಘಿಸಿದ್ದನ್ನು ಪ್ರತಿಭಟಿಸಿ ಕೇಂದ್ರ ಸರಕಾರದ ನೌಕರರು ಮಾರ್ಚ್ 16ಕ್ಕೆ ಮುಷ್ಕರ ನಡೆಸಲಿದ್ದಾರೆ. ಕೇಂದ್ರಸರಕಾರದ ನೌಕರರು ಮತ್ತು ಕೆಲಸಗಾರರ ಒಕ್ಕೂಟದ ನೇತೃತ್ವದಲ್ಲಿ ದೇಶಾದ್ಯಂತ ಮುಷ್ಕರ ನಡೆಯಲಿದೆ.

ಏಳನೆ ವೇತನ ಆಯೋಗದ ಶಿಫಾರಸಿನ ಆಧಾರದಲ್ಲಿ ಘೋಷಿಸಿದ ಮೂಲ ಸಂಬಳ ಮೊತ್ತದಲ್ಲಿ ತಿದ್ದುಪಡಿ ತರಬೇಕು. ವೇತನ ನಿಗದಿಪಡಿಸುವ ಸೂತ್ರ  ಪರಿಷ್ಕರಣೆ ಯಾಗಬೇಕು. ಭತ್ತೆಗಳನ್ನು ಮತ್ತೆ ನೀಡಬೇಕು. ಹೆಚ್ಚಿದ ಮನೆಬಾಡಿಗೆ ಪ್ರಕಾರ ಮನೆ ಭತ್ತೆಯಲ್ಲಿ ಹೆಚ್ಚಳ ಮಾಡಬೇಕು ಮುಂತಾದ ಬೇಡಿಕೆಯೊಂದಿಗೆ ಮುಷ್ಕರ ನಡೆಯಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News