ಮಾ.5: ನಾಟೆಕಲ್ ನಲ್ಲಿ ಸಲಫಿ ಸಮಾವೇಶ
Update: 2017-03-04 13:33 IST
ಮಂಗಳೂರು, ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಹಮ್ಮಿಕೊಂಡಿರುವ ಕುರ್‌ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಸ್.ಕೆ.ಎಸ್.ಎಂ.ನ ದೇರಳಕಟ್ಟೆ ಘಟಕದ ವತಿಯಿಂದ ಮಾ.5ರಂದು ಮಗ್ರಿಬ್ ನಮಾಝ್ ಬಳಿಕ ನಾಟೆಕಲ್ ಜಂಕ್ಷನ್‌ನಲ್ಲಿ ಸಲಫಿ ಸಮಾವೇಶ ಜರಗಲಿದೆ.
ಸಮಾವೇಶದಲ್ಲಿ ಹಿರಿಯ ವಿದ್ವಾಂಸ ಚುಯೈಲಿ ಅಬ್ದುಲ್ಲ ಮುಸ್ಲಿಯಾರ್ ಉಪನ್ಯಾಸ ನೀಡುವರು.
ಸ್ಥಳೀಯ ಸಾಮಾಜಿಕ ಮುಂದಾಳುಗಳಾದ ಹಾಜಿ ಪಿ.ಎಂ.ಅಬೂಬಕರ್, ಎಸ್.ಮೊಯ್ದಿನ್ ಕುಂಞಿ ಮತ್ತು ಅಬ್ದುಲ್ ಜಬ್ಬಾರ್ ಮಾರಿಪಳ್ಳ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.