ಅಡ್ಡೂರು ಸನ್ ಶೈನ್ ಫ್ರೆಂಡ್ಸ್‌ಗೆ ಪದಾಧಿಕಾರಿಗಳ ಆಯ್ಕೆ
Update: 2017-03-04 15:45 IST
ಮಂಗಳೂರು, ಮಾ.4: ಅಡ್ಡೂರಿನ ಸನ್ ಶೈನ್ ಫ್ರೆಂಡ್ಸ್ ಇದರ 17ನೆ ವಾರ್ಷಿಕ ಮಹಾಸಭೆಯು ಹಿದಾಯತುಲ್ಲಾ ಎಂ.ಎಸ್. ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಈ ವೇಳೆ 2017-18ರ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಇಬ್ರಾಹೀಂ ಎ.ಎಂ., ಗೌರವಾಧ್ಯಕ್ಷರಾಗಿ ಇಕ್ಬಾಲ್ ಎ.ಎಂ., ಉಪಾಧ್ಯಕ್ಷರಾಗಿ ಜಲೀಲ್ ಜಿ.ಎ. ಮತ್ತು ಜಲೀಲ್ ಜಿ., ಪ್ರಧಾನ ಕಾರ್ಯದರ್ಶಿಯಾಗಿ ಇರ್ಫಾನ್, ಜೊತೆ ಕಾರ್ಯದರ್ಶಿಯಾಗಿ ಇರ್ಷಾದ್, ಕೋಶಾಧಿಕಾರಿಯಾಗಿ ನೂರುಲ್ ಅಮೀನ್, ಸಲಹೆಗಾರರಾಗಿ ಹಿದಾಯತುಲ್ಲಾ ಎಂ.ಎಸ್., ಹನೀಫ್ ಎ.ಕೆ., ಹೈದರ್ ಕೆ. ಹಾಗೂ ಕೋರ್ ಕಮಿಟಿ ಸದಸ್ಯರಾಗಿ ಅಬ್ದುಲ್ ರಹ್ಮಾನ್ ಪಡ್ಪು, ಇಕ್ಬಾಲ್ ಜಿ.ಎ., ಮುಹಮ್ಮದ್ ಎನ್., ರಹೀಮ್, ನವಾಝ್ ಜಿ.ಎ., ಅಶ್ರಫ್, ಹಕೀಮ್ ಜಿ.ಎ., ಝುಬೈರ್ ಮತ್ತು ಮೀಟಿಂಗ್ ಕಾಲ್ಗಾಗಿ ನಿಝಾಮ್ ಮತ್ತು ಶರಫ್‌ಅವವರನ್ನು ಸರ್ವಾನುಮತಗಳಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.