×
Ad

ಮಸ್ಜಿದುನ್ನಬವಿಯ ನಿರ್ದೇಶಕರನ್ನು ಭೇಟಿಯಾದ ಡಾ.ಸಿ.ಪಿ.ಹಬೀಬ್ ರಹ್ಮಾನ್

Update: 2017-03-04 16:55 IST

ಮದೀನಾ, ಮಾ4: ಉಮ್ರಾ ಪ್ರವಾಸದಲ್ಲಿರುವ ಮಂಗಳೂರಿನ ಯುನಿಟಿ ಕೇರ್ ಆ್ಯಂಡ್ ಹೆಲ್ತ್ ಸರ್ವೀಸಸ್ ಪ್ರೈ. ಲಿ.ನ ಅಧ್ಯಕ್ಷ ಹಾಗೂ ವೈದ್ಯಕೀಯ ನಿರ್ದೇಶಕ ಮತ್ತು ಯುನಿಟಿ ಇಲ್ಮ್ ಸೆಂಟರ್‌ನ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್ ಅವರು ಮಸ್ಜಿದುನ್ನಬವಿಯ ವೈಜ್ಞಾನಿಕ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಉಮರ್ ಬಿನ್ ಅಮೀರ್ ಅಲ್ ಖೊರ್ಮಾನಿ ಅವರನ್ನು ಮಸ್ಜಿದುನ್ನಬವಿಯ ಆಡಳಿತ ಕಚೇರಿಯಲ್ಲಿ ಇತ್ತೀಚೆಗೆ ಭೇಟಿಯಾಗಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು.

ಈ ವೇಳೆ ಡಾ.ಹಬೀಬ್ ರಹ್ಮಾನ್ ಅವರು ಮಕ್ಕಾ ಹಾಗೂ ಮದೀನಾದಲ್ಲಿ ಯಾತ್ರಾರ್ಥಿಗಳಿಗೆ ಒದಗಿಸಿರುವ ಅತ್ಯುತ್ತಮ ಸೌಕರ್ಯವನ್ನು ಶ್ಲಾಘಿಸಿದರು.

ಮಕ್ಕಾಕ್ಕೆ ಬರುವಾಗ ಜಿದ್ದಾ ವಿಮಾನ ನಿಲ್ದಾಣದಲ್ಲಿ ಮದೀನಾಕ್ಕೆ ಬರುವವರು ಮದೀನಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಗುತ್ತಿರುವ ಕೆಲವು ಸಮಸ್ಯೆಗಳ ಬಗ್ಗೆ ಡಾ.ಉಮರ್ ಅವರ ಗಮನಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News