ಎಂಕಾಂ, ಎಂಎಸ್ಸಿ ಪರೀಕ್ಷೆ: ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಮೂರು ರ‍್ಯಾಂಕ್
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಿಭಾಗಗಳಾದ ಎಂಕಾಂ ಹಾಗೂ ಎಂಎಸ್ಸಿಯ ಮೂವರು ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಕಳೆದ ಶೈಕ್ಷಣಿಕ ವರ್ಷದಲ್ಲಿ ಆಯೋಜಿಸಿದ ಪರೀಕ್ಷೆಗಳಲ್ಲಿ ರ‍್ಯಾಂಕ್ ಲಭಿಸಿದೆ.
ರಸಾಯನ ಶಾಸ್ತ್ರ ಎಂಎಸ್ಸಿ ವಿಭಾಗದಲ್ಲಿ ವಿಶಾಖಾ ರೈ ಗರಿಷ್ಟ 2,500 ಅಂಕಗಳಲ್ಲಿ 1,937 ಅಂಕಗಳನ್ನು ಗಳಿಸುವುದರ ಮೂಲಕ ಮೊದಲ ರ‍್ಯಾಂಕ್ ಪಡೆದರೆ, ಅನ್ನಪೂರ್ಣಿಕ ಪ್ರಭು 1,846 ಅಂಕಗಳೊಂದಿಗೆ ಮೂರನೆಯ ರ‍್ಯಾಂಕ್ ದಾಖಲಿಸಿದ್ದಾರೆ.
ಅಂಎಂಕಾಂ ವಿಭಾಗದಲ್ಲಿ ರೇಷ್ಮಾ ಎನ್ ಗರಿಷ್ಟ 2,025 ಅಂಕಗಳಲ್ಲಿ 1,591 ಅಂಕ ಗಳಿಸಿ ತೃತೀಯ ರ‍್ಯಾಂಕ್ಗೆ ಭಾಜನರಾಗಿದ್ದಾರೆ.
ವಿಶಾಖ ರೈ ಬಂಟ್ವಾಳದ ಕಡೆಶಿವಾಲಯದ ಶ್ರೀಧರ ರೈ ಹಾಗೂ ಅನಿತಾ ರೈ ದಂಪತಿಯ ಪುತ್ರಿ. ಅನ್ನಪೂರ್ಣ ಪ್ರಭು ಪುತ್ತೂರಿನ ದಾರಂದಕುಕ್ಕು ನಿವಾಸಿಗಳಾದ ಅಚ್ಯುತ ಪ್ರಭು ಹಾಗೂ ವಿಜಯಲಕ್ಷ್ಮಿ ಪ್ರಭು ಪುತ್ರಿಯಾದರೆ, ರೇಷ್ಮಾ ಕೆ ಕಾಸರಗೋಡಿನ ಕಾಟುಕುಕ್ಕೆ ನಿವಾಸಿಗಳಾದ ಮಹಾಲಿಂಗ ಭಟ್ ಹಾಗೂ ಶಶಿಕಲಾ ದಂಪತಿ ಪುತ್ರಿ.