ಮಲ್ಪೆ: ರಾಷ್ಟ್ರೀಯ ವಿಜ್ಞಾನ ದಿವಸ ಆಚರಣೆ
Update: 2017-03-04 18:04 IST
ಮಲ್ಪೆ, ಮಾ.4: ಮಲ್ಪೆ ಫ್ಲವರ್ಸ್ ಆಫ್ ಪ್ಯಾರಾಡೈಸ್ ಪಬ್ಲಿಕ್ ಸ್ಕೂಲ್‌ನಲ್ಲಿ ರಾಷ್ಟ್ರೀಯ ವಿಜ್ಞಾನ ದಿವಸವನ್ನು ಇತ್ತೀಚೆಗೆ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಉಡುಪಿ ಎಂಜಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಉಷಾರಾಣಿ ಮಕ್ಕಳಿಗೆ ವಿವಿಧ ಬಗೆಯ ಔಷಧೀಯ ಗುಣವಿರುವ ಸಸ್ಯಗಳ ಮತ್ತು ತರಕಾರಿಗಳ ಕುರಿತು ಮಾಹಿತಿ ನೀಡಿದರು.
ಸಂಸ್ಥೆಯ ಸಂಚಾಲಕ ಕರಮತುಲ್ಲಾ ಉಪಸ್ಥಿತರಿದ್ದರು. ಮುಖ್ಯೋಪಾ ಧ್ಯಾಯ ಶಿವಪ್ರಸಾದ್ ಕೆ.ರಾಷ್ಟ್ರೀಯ ವಿಜ್ಞಾನ ದಿವಸದ ಮಹತ್ವವನ್ನು ತಿಳಿಸಿದರು.
ಶಿಕ್ಷಕಿ ತೇಜಸ್ವಿನಿ ಔಷಧೀಯ ಸಸ್ಯಗಳ ಮಹತ್ವ ತಿಳಿಸಿದರು. ಸಹ ಮುಖ್ಯ ಶಿಕ್ಷಕಿ ಆಶಾಜ್ಯೋತಿ ಸ್ವಾಗತಿಸಿದರು. ಶಿಕ್ಷಕ ಶಶಿರಾಜ್ ವಂದಿಸಿ ದರು. ಶಿಕ್ಷಕಿ ರಚಿತಾ ಕಾರ್ಯಕ್ರಮ ನಿರೂಪಿಸಿದರು.