×
Ad

ಬೆಳ್ತಂಗಡಿ ಹೋಬಳಿ ಮಟ್ಟದ ಜನ ಸಂಪರ್ಕ ಸಭೆ

Update: 2017-03-04 18:15 IST

ಬೆಳ್ತಂಗಡಿ, ಮಾ.4: ಬೆಳ್ತಂಗಡಿ ಹೋಬಳಿ ಮಟ್ಟದ ಜನ ಸಂಪರ್ಕ ಸಭೆಯು ರಾಜ್ಯ ಸಣ್ಣ ಕೈಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಕೆ. ವಸಂತ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಗುರುವಾಯನಕೆರೆ ನಮ್ಮ ಮನೆ ಹವ್ಯಾಕ ಸಭಾ ಭವನದಲ್ಲಿ ನಡೆಯಿತು.

ಕುವೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ಮೆಸ್ಕಂ ಬೀದಿ ದೀಪಗಳನ್ನು ತೆರವುಗೊಳಿಸಿದ್ದು ಇದರಿಂದ ಕುವೆಟ್ಟು ಗ್ರಾಪಂ ಕತ್ತಲೆಮಯವಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಬೀದಿ ದೀಪಗಳನ್ನು ಅಳವಡಿಸಬೇಕು. ಇಲ್ಲವಾದ್ದಲ್ಲಿ ಮೆಸ್ಕಂ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸಲಿಂ, ರಫೀಕ್, ದಯಾನಂದ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಶಂಕರ್,  ಅಕ್ರಮ ಬೀದಿ ದೀಪ ಅಳವಡಿಸಿದ್ದನ್ನು ಸಕ್ರಮಗೊಳಿಸುವಂತೆ 6 ತಿಂಗಳಿನಿಂದ ಪಂಚಾಯತಿಗೆ 6 ನೋಟಿಸುಗಳನ್ನು ನೀಡಲಾಗಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ ಅದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎಂದಾಗ, ಅಕ್ರೋಶಗೊಂಡ ಸಾರ್ವಜನಿಕರು, ಸರಕಾರದ ಅದೀನದಲ್ಲಿರುವ ಇಲಾಖೆ ಸಾರ್ವಜನಿಕರಿಗೆ ಅನ್ಯಾಯ ಮಾಡುವುದು ಸರಿಯಲ್ಲ ಇಲಾಖೆ ಮತ್ತು ಪಂಚಾಯತ್ ನಡುವಿನ ಗೊಂದಲದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಕೂಡಲೇ ಬೀದಿ ದೀಪ ಅಳವಡಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ಆಗುವ ಬಗ್ಗೆ ಪಂಚಾಯತ್ ಇಲಾಖೆಗೆ ಪತ್ರ ಬರೆಯಲಿ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಹಣಿ ಪತ್ರದಲ್ಲಿ ಕೃಷಿ ಎಂದು ನಮೂದಾಗಿದ್ದರು ಕೆಲವು ಬಾರಿ ಪಹಣಿ ಪತ್ರಿಕೆಯಿಂದ ಅದನ್ನು ತೆಗೆಲಾಗುತ್ತದೆ ಇದರಿಂದ ರೈತರಿಗೆ ತೊಂದರೆಯಾಗುತ್ತದೆ ಎಂದು ಜಾಕೋಬ್ ಇಂದಬೆಟ್ಟು ತಿಳಿಸಿದರು. ಕುವೆಟ್ಟು ಅನಿಲ ಎಂಬಲ್ಲಿ ಸಾಮಾನ್ಯ ಸಭೆ, ಗ್ರಾಮ ಸಭೆಯಲ್ಲಿ 32 ಮಂದಿಗೆ ನಿವೇಶನ ಮಂಜೂರಿಗೆ ಅನುಮೋದನೆ ಸಿಕ್ಕಿ ನಂತರ ಜಿಲ್ಲಾಧಿಕಾರಿಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಇದಕ್ಕೆ ಮಂಜೂರತಿಯಾದ ನಂತರ ಹಕ್ಕು ಪತ್ರ ತಯಾರಾಗಿದ್ದು ಆದರೆ ಇದುವರೆಗೆ ಹಕ್ಕು ಪತ್ರ ನೀಡಿಲ್ಲ ಇದರಿಂದ ಬಡವರಿಗೆ ಅನ್ಯಾಯವಾಗಿದೆ ಕೂಡಲೇ ಹಕ್ಕು ಪತ್ರ ನೀಡಬೇಕು ಎಂದು ರಫೀಕ್, ಸಲಿಂ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಇದಕ್ಕೆ ಸಂಬಧಿಸಿದ ಜಾಮೀನನ್ನು 4 ವರ್ಷದ ಹಿಂದೆ ಪಂಚಾಯತ್‌ಗೆ ಹಸ್ತಾಂತರ ಮಾಡಲಾಗಿದ್ದು ಇದು ಪಂಚಾಯತ್‌ನ ಜವಾಬ್ದಾರಿ ಎಂದಾಗ ಈ ರೀತಿಯ ನಿರ್ಲಕ್ಷ್ಯದ ಬಗ್ಗೆ ಅಕ್ರೋಶ ವ್ಯಕ್ತವಾಯಿತು ನಂತರ ತಾ.ಪಂ ಮುಖ್ಯ ಕಾರ್ಯನಿರ್ವಣಾ ಅಧಿಕಾರಿ ಸಿ. ಆರ್ ನರೇಂದ್ರ ಮಾತನಾಡಿ ಜಾಗೃತ ಸಮಿತಿಯಲ್ಲಿ ನೀವೆಶನ ಮಂಜೂರದವರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

 ಜಾಕೋಬ್ ಇಂದಬೆಟ್ಟು ಮಾತನಾಡಿ, ಕುದುರೆಮುಖ ರಕ್ಷಿತಾರಣ್ಯದಲ್ಲಿ ಶಿಖಾರಿ ಹೋಗುವವರು ಕಾಡಿಗೆ ಬೆಂಕಿ ಹಚ್ಚಿ ಸಾವಿರಾರು ಮರಗಳನ್ನು ನಾಶಮಾಡುತಿದ್ದಾರೆ. ಇವರ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಉಪ ವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್ ಇಂತವರ ವಿರುದ್ದ ಕ್ರಮಕೈಗೊಳ್ಳಲಾಗುತ್ತದೆ ಸಾರ್ವಜನಿಕರು ಇಂತವರ ಮಾಹಿತಿಯನ್ನು ನಮಗೆ ನೀಡಿ ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದರು.

ಗ್ರಾಮ ಸಭೆಗೆ ಅಧಿಕಾರಿಗಳು ಕಡ್ಡಾಯ ಬರಬೇಕು, ಸರಕಾರದ ವಸತಿ ಯೋಜನೆಯಡಿ ಎಲ್ಲಾ ಪಂಚಾಯತಿಗಳಿಗೆ ಸಮಾನ ಹಂಚಿಕೆಯಾಗಬೇಕು, ಕಾಡು ಪ್ರಾಣಿಗಳಿಂದ ಕೃಷಿ ನಾಶವಾಗುತ್ತಿದ್ದು ಇದಕ್ಕೆ ಸಕಾರ ಪರಿಹಾರ ನೀಡಬೇಕು, ಬೆಳ್ತಂಗಡಿ ಕಿಲ್ಲೂರಿಗೆ ಸರಕಾರಿ ಬಸ್ಸ್ ಹಾಕಬೇಕು, ಕನ್‌ವರ್ಷನ್ ಮಾಡಲು ತಾಲೂಕು ಮಟ್ಟದಲ್ಲಿ ಕ್ರಮಕೈಗೊಳ್ಳಬೇಕು, ಗುರುವಾಯನಕೆರೆ ಪರಿಸರದಲ್ಲಿ ಸ್ವಚ್ಛತೆಗೆ ಗಮನಕೊಡಬೇಕು ಎಂಬ ಬೇಡಿಕೆಗಳು ಸಭೆಯಲ್ಲಿ ಬಂತು.

ಸಭೆಯಲ್ಲಿ ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ತಾ.ಪಂ ಅಧ್ಯಕ್ಷೆ ದಿವ್ಯ ಜ್ಯೋತಿ, ಜಿ.ಪಂ ಸದಸ್ಯರಾದ ಶೇಖರ್ ಕುಕ್ಕೇಡಿ, ಮಮತ ಶೆಟ್ಟಿ, ತಾ.ಪಂ ಉಪಾಧ್ಯಾಕ್ಷೆ ವೇದಾವತಿ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಮುಗುಳಿ ನಾರಾಯಣ ರಾವ್, ತಾ.ಪಂ ಸದಸ್ಯರಾದ ಗೋಪಿನಾಥ್ ನಾಯಕ್, ಸೆಬಾಸ್ಟಿಯನ್, ತಹಶೀಲ್ದಾರ್ ತಿಪ್ಪೇ ಸ್ವಾಮಿ ಉಪಸ್ಥಿತರಿದ್ದರು. ಸಿಬ್ಬಂದಿ ಹೇಮಾ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News