ಬಸ್ಸಿನಿಂದ ಬಿದ್ದು ಮಹಿಳೆ ಮೃತ್ಯು
Update: 2017-03-04 20:51 IST
ಶಂಕರನಾರಾಯಣ, ಮಾ.4: ಹೈಕಾಡಿ ಎಂಬಲ್ಲಿ ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಂದು ನಡೆದಿದೆ.
ಮೃತರನ್ನು ನಾಗರಾಜ ದಾಮ್ಲೆ ಎಂಬವರ ಪತ್ನಿ ಸರೋಜ(42) ಎಂದು ಗುರುತಿಸಲಾಗಿದೆ. ತನ್ನ ಮಗನೊಂದಿಗೆ ವೈದ್ಯರಲ್ಲಿಗೆ ಬಸ್ಸಿನಲ್ಲಿ ಹೋಗುತ್ತಿ ದ್ದಾಗ ರಸ್ತೆಯಲ್ಲಿದ್ದ ಹೊಂಡಕ್ಕೆ ಬಿದ್ದು ಬಸ್ ಜಿಗಿದ ಪರಿಣಾಮ ಎದುರು ಸೀಟಿನಲ್ಲಿ ಕುಳಿತಿದ್ದ ಸರೋಜ ಆಯ ತಪ್ಪಿ ಕೆಳಕ್ಕೆ ಬಿದ್ದು ಚರಂಡಿಗೆ ತಲೆ ಅಪ್ಪಳಿಸಿ ಸ್ಥಳದಲ್ಲೇ ಮೃತಪಟ್ಟರು.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.