ಪಡುಬಿದ್ರಿ: ಪರೀಕ್ಷಾ ಪೂರ್ವ ಸಿದ್ದತಾ ತರಬೇತಿ ಶಿಬಿರ
ಪಡುಬಿದ್ರಿ, ಮಾ.4 ವಿದ್ಯಾರ್ಥಿಗಳು ಮಾನಸಿಕ ಹಾಗೂ ಪಠ್ಯ ಸಂಬಂಧಿ ತೊಂದರೆಗಳಿಂದ ಹೊರ ಬಂದು ನಿಸ್ಸಂದೇಹವಾಗಿ ಪರೀಕ್ಷೆ ಎದುರಿಸಬೇಕು. ಕೇವಲ ಓದುವಿಕೆ ಒಂದೇ ವಿಧವಲ್ಲ, ಏಳು ರೀತಿಯ ಓದುವಿಕೆ ಇದೆ. ಶಿಬಿರದಲ್ಲಿ ಪಡೆದ ತರಬೇತಿಯ ವಿಷಯಗಳನ್ನು ಸರಿಯಾಗ ಅರ್ಥೈಸಿ ಪರೀಕ್ಷೆಗೆ ಸಿದ್ದರಾಗಿ ಎಂದು ತರಬೇತುದಾರ ಸುಧಾಕರ ಕಾರ್ಕಳ ಸಲಹೆ ನೀಡಿದರು.
ಪಡುಬಿದ್ರಿ ರೋಟರಿ ಕ್ಲಬ್ ಹಾಗೂ ಭಾರತ್ ನವ ನಿರ್ಮಾಣ್ ವೇದಿಕೆ ಪಲಿಮಾರು ಘಟಕದ ವತಿಯಿಂದ ನಿಲೇಶ್ ಪೂಜಾರಿ ಪ್ರಾಯೋಜಕತ್ವದಲ್ಲಿ ಪಲಿಮಾರಿನ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಪರೀಕ್ಷಾ ಪೂರ್ವ ಸಿದ್ದತಾ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಬಾಬು ಸುವರ್ಣ ಶಿಬಿರವನ್ನು ಉದ್ಘಾಟಿಸಿದರು. ರೋಟರಿ ಅಧ್ಯಕ್ಷ ಹಮೀದ್ ಪಡುಬಿದ್ರಿ ಅಧ್ಯಕ್ಷತೆ ವಹಿಸಿದ್ದರು.
ಎಪಿಎಂಸಿ ಸದಸ್ಯ ನವೀನ್‌ಚಂದ್ರ ಸುವರ್ಣ, ರೋಟರಿ ಕ್ಲಬ್‌ನ ಕಾರ್ಯದರ್ಶಿ ಕರುಣಾಕರ ನಾಯಕ್, , ಭಾರತ್ ನವ ನಿರ್ಮಾಣ್ ವೇದಿಕೆಯ ದಿನೇಶ್ ಕೋಟ್ಯಾನ್, ಸದಸ್ಯರಾದ ಸಂದೀಪ್, ಇಸ್ಮಾಯಿಲ್ ಪಲಿಮಾರ್‌ಶಾಲಾ ಮುಖ್ಯ ಶಿಕ್ಷಕಿ ಆಶಾ ಕೆ, ಎಸ್‌ಡಿಎಂಸಿ ಅಧ್ಯಕ್ಷ ದಯಾನಂದ, ಯಶವಂತ್ ಇದ್ದರು.