ಉಡುಪಿ: ಮಾ.7ರಂದು 'ಎಂಪವರ್' ಕಾರ್ಯಕ್ರಮ
ಉಡುಪಿ, ಮಾ.4: ಮಹಿಳಾ ಉದ್ಯಮಿಗಳ ವೇದಿಕೆ ಱಪವರ್‌ೞಸಂಸ್ಥೆಯ ವತಿಯಿಂದ ಮಣಿಪಾಲ ಮಹಿಳಾ ಸಮಾಜ ಮತ್ತು ಉಡುಪಿ ಇನ್ನರ್ ವ್ಹೀಲ್ ಕ್ಲಬ್‌ನ ಸಹಯೋಗದೊಂದಿಗೆ ವಾರ್ಷಿಕ ಹಾಗೂ ಮಹಿಳಾ ದಿನಾ ಚರಣೆ ಱಎಂಪವರ್‌ೞಕಾರ್ಯಕ್ರಮವನ್ನು ಮಾ.7ರಂದು ಸಂಜೆ 4ಗಂಟೆಗೆ ಉಡುಪಿ ಹೊಟೇಲ್ ಕಿದಿಯೂರಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಮುಖ್ಯ ಅತಿಥಿಯಾಗಿ ಸಾಮಾಜಿಕ ಕಾರ್ಯಕರ್ತೆ ವರೋನಿಕಾ ಕರ್ನೆಲಿಯೋ ಭಾಗವಹಿಸಲಿದ್ದಾರೆ. ಪವರ್ ಸಂಸ್ಥೆಯ ನೂತನ ಪದಾಧಿಕಾರಿ ಗಳ ಪದಗ್ರಹಣ ಸಮಾರಂಭವು ಇದೇ ಸಂದರ್ಭದಲ್ಲಿ ಜರಗಲಿದೆ ಎಂದು ಪವರ್ ಅಧ್ಯಕ್ಷ ಸರಿತಾ ಸಂತೋಷ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರಾದ ಶಂಕರನಾರಾಯಣ ಮದರ್ ಥೆರೆಸಾ ಶಾಲೆಯ ಶಮಿತಾ, ರೆನಿಟಾ, ಕುಂಜಿಬೆಟ್ಟು ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮೃದುಲಾ ಅವರನ್ನು ಸನ್ಮಾನಿಸಲಾಗುವುದು.
ಇನ್ನರ್ ವ್ಹೀಲ್‌ನಿಂದ ಆರ್ಥಿಕವಾಗಿ ಹಿಂದುಳಿದ ಇಬ್ಬರು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ವೈದ್ಯಕೀಯ ವೆಚ್ಚಕ್ಕಾಗಿ ಹಣಕಾಸಿನ ನೆರವು ನೀಡಲಾಗು ವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಶ್ರುತಿ ಶೆಣೈ, ಸಂಸ್ಥಾಪಕ ಅಧ್ಯಕ್ಷೆ ರೇಣು ಜಯರಾಮ್, ನಿಯೋಜಿತ ಅಧ್ಯಕ್ಷೆ ಡಾ.ಗಾಯತ್ರಿ, ನಿಯೋಜಿತ ಕಾರ್ಯ ದರ್ಶಿ ಡಾ.ಸ್ಮಿತಾ ರಜನೀಸ್ ಉಪಸ್ಥಿತರಿದ್ದರು.