ಮಂಗಳೂರು: ಮಾ.6ರಂದು ಕರಾವಳಿ ಫಾರ್ಮಸಿ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
ಮಂಗಳೂರು, ಮಾ. 4: ನಗರದ ವಾಮಂಜೂರಿನ ಕರಾವಳಿ ಫಾರ್ಮಸಿ ಕಾಲೇಜಿನಲ್ಲಿ ಮಾ.6ರಂದು ಱಪ್ರೆಸೆಂಟ್ ಆ್ಯಂಡ್ ಫ್ಯೂಚರ್ ಚ್ಯಾಲೆಂಜಸ್ ಆಫ್ ಕ್ಲಿನಿಕಲ್ ಫಾರ್ಮಸಿಸ್ಟ್ ಆನ್ ಮೆಡಿಕೇಶನ್ ಎರರ್ಸ್‌ೞಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ ಜಿ.ಆರ್.ಎಜ್ಯುಕೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ನೆರವೇರಿಸಲಿದ್ದು, ಮಣಿಪಾಲ ಕಾಲೇಜ್ ಆಫ್ ಫಾರ್ಮಸ್ಯುಟಿಕಲ್ ಸೈನ್ಸ್ ಕಾಲೇಜಿನ ಫಾರ್ಮಸಿ ಪ್ರಾಕ್ಟಿಸ್ ವಿಭಾಗದ ಮುಖ್ಯಸ್ಥ ಡಾ. ಎಮ್.ಕೆ.ಉಣ್ಣಿ ಕೃಷ್ಣನ್ ಹಾಗೂ ಹರಪ್ಪನಹಳ್ಳಿ ಎಸ್.ಸಿ.ಎಸ್. ಫಾರ್ಮಸಿ ಕಾಲೇಜಿನ ಫಾರ್ಮಸಿ ಪ್ರಾಕ್ಟಿಸ್ ವಿಭಾಗದ ನಿರ್ದೇಶಕ ಡಾ. ಅನಂತ ನಾಗಪ್ಪ ನಾಯ್ಕಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ನುರಿತ ತಜ್ಞರು ಔಷಧಗಳ ಬಗ್ಗೆ ಫಾರ್ಮಸಿ ವಿದ್ಯಾರ್ಥಿಗಳಿಗೆ ಔಷಧಗಳ ಬಗ್ಗೆ ಅರಿವು ಹಾಗೂ ಇದರಲ್ಲಿ ತಲೆದೋರುವ ಸಮಸ್ಯೆಗಳನ್ನು ಎದುರಿಸುವ ಬಗ್ಗೆ ನುರಿತ ತಜ್ಞರೊಂದಿಗೆ ಸಮಾಲೋಚನೆ ಮತ್ತು ವಿವಿಧ ಔಷಧಗಳ ಪರಿಣಾಮ, ವೈದ್ಯರು ನೀಡಿದ ಸಲಹೆ ಹಾಗೂ ರೋಗಿಗಳ ಕೌನ್ಸಲಿಂಗ್ ಬಗೆಗಿನ ಸಮಾಲೋಚನೆಯು ನಡೆಯಲಿದೆ.
ಫಾರ್ಮಸಿ ವಿದ್ಯಾರ್ಥಿಗಳಲ್ಲಿ ಮತ್ತು ಕ್ಲಿನಿಕಲ್ ಫಾರ್ಮಸಿಸ್ಟ್‌ಗಳಲ್ಲಿ ಇರುವ ಸಮಸ್ಯೆಗಳನ್ನು ಹೋಗಲಾಡಿಸಿ ಅವರ ಜ್ಞಾನವನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ವಿಚಾರ ಸಂಕಿರ್ಣದಲ್ಲಿ ಆಸಕ್ತ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.