×
Ad

​ಕುಂದಾಪುರ: ಉದ್ದಿಮೆ ಪರವಾನಗಿ ನವೀಕರಣಕ್ಕೆ ಸೂಚನೆ

Update: 2017-03-04 22:40 IST

ಉಡುಪಿ, ಮಾ.4: ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ವ್ಯಾಪಾರ ನಡೆಸುತ್ತಿರುವ ಉದ್ದಿಮೆದಾರರು 2016-17ನೇ ಸಾಲಿನ ಉದ್ದಿಮೆ ಪರವಾನಿಗೆ ಯನ್ನು ನವೀಕರಣ ಮಾಡದಿದ್ದಲ್ಲಿ ಕೂಡಲೇ ದಂಡ ಸಹಿತ ಶುಲ್ಕವನ್ನು ಪಾವತಿಸಿ ಪರವಾನಿಗೆಯನ್ನು ನವೀಕರಿಸಿಕೊಳ್ಳುವಂತೆ ತಿಳಿಸಲಾಗಿದೆ.

ಅರ್ಜಿದಾರರ ಪಾಸ್‌ಪೋರ್ಟ್ ಸೈಜ್ ಭಾವಚಿತ್ರ 1, ಆಧಾರ್ ಕಾರ್ಡ್ ಪ್ರತಿ, ಕಟ್ಟಡದ ವಿದ್ಯುತ್ ಬಿಲ್ ಪ್ರತಿ, ಕರಾರು ಪತ್ರದ ಪ್ರತಿ, ಆಸ್ತಿ ತೆರಿಗೆಯ ರಸೀದಿ ಪ್ರತಿ, ಅಂಗಡಿ ಕೋಣೆಯ ಮುಂಭಾಗದ ಫೋಟೋ, ಆರ್‌ಟಿಸಿ ಪ್ರತಿಯನ್ನು ಲಗಿತ್ತೀಕರಿಸಿ 2017-18ನೇ ಸಾಲಿನ ಉದ್ದಿಮೆ ಪರವಾನಿಗೆಯನ್ನು ನವೀಕರಿಸಿಕೊಳ್ಳಲು ಸೂಚಿಸಲಾಗಿದೆ.

2016-17ನೇ ಸಾಲಿನ ಮತ್ತು ಹಿಂದಿನ ವರ್ಷಗಳ ಕಟ್ಟಡದ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವ ಕುಂದಾಪುರ ಪುರಸಭಾ ವ್ಯಾಪ್ತಿಯ ಖಾತಾದಾರರು ಮಾರ್ಚ್ 31ರ ಒಳಗೆ ದಂಡನಾ ಸಹಿತವಾಗಿ ತೆರಿಗೆಯನ್ನು ಪಾವತಿಸುವಂತೆ ಸೂಚಿಸಲಾಗಿದೆ.

ಪೌರಾಡಳಿತದ ನಿರ್ದೇಶನಾಲಯದಿಂದ ಇ-ಆಸ್ತಿ ತಂತ್ರಾಂಶವನ್ನು ಜಾರಿ ಗೊಳಿಸಲಾಗಿದ್ದು, ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ತಮ್ಮ ಕಟ್ಟಡವನ್ನು ಹೊಂದಿರುವ ಕಟ್ಟಡ ಮಾಲಿಕರು ತಮ್ಮ ಕಟ್ಟಡದ ಪೋಟೋ, ಮಾಲಿಕರ ಪೋಟೋ, ಆಧಾರ್ ಕಾರ್ಡ್, ಆರ್‌ಆರ್ ನಂಬರ್, ಮೊಬೈಲ್ ನಂಬರ್, ಪುರಸಭೆಯಿಂದ ಅನುಮೋದಿತ ಕಟ್ಟಡ ಪರವಾನಿಗೆ ಆದೇಶ, ಪುರಸಭೆಯಿಂದ ಅನುಮೋದಿತ ಕಟ್ಟಡದ ನೀಲಿ ನಕ್ಷೆ, ಭೂ ಪರಿವರ್ತನಾ ಆದೇಶ, ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದ ಆದೇಶದ ಪ್ರತಿಯನ್ನು ಕಚೇರಿಗೆ ಸಲ್ಲಿಸಿ ಇ-ಆಸ್ತಿ ತಂತ್ರಾಂಶದಲ್ಲಿ ತಮ್ಮ ಆಸ್ತಿಯನ್ನು ದಾಖಲಿಸಲು ಸಹಕರಿಸು ವಂತೆ ಕುಂದಾಪುರ ಪುರಸಭೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News