ಮಾ.6ರಂದು ಮನಪಾ ಸುರತ್ಕಲ್ ವಲಯ ಕಚೇರಿ ಉದ್ಘಾಟನೆ
ಮಂಗಳೂರು, ಮಾ.4: ಮಹಾನಗರಪಾಲಿಕೆಯಲ್ಲಿ ಸಾರ್ವಜನಿಕರಿಗೆ ಸೇವೆಯನ್ನು ತ್ವರಿತಗತಿ, ಜನಸ್ನೇಹಿ ಹಾಗೂ ಹೆಚ್ಚಿನ ಪರಿಣಾಮಕಾರಿಯಾಗಿ ನೀಡಲು ಆಡಳಿತಾತ್ಮಕ ಹಿತದೃಷ್ಟಿಯಿಂದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ. ಇದರಂಗವಾಗಿ ಸುರತ್ಕಲ್‌ನಲ್ಲಿ ತೆರೆ ಯಲಾಗುವ ಮನಪಾ ವಲಯ ಕಚೇರಿಯನ್ನು ಮಾ.6ರಂದು ಬೆಳಗ್ಗೆ 10 ಗಂಟೆಗೆ ಶಾಸಕ ಬಿ.ಎ.ಮೊಯ್ದಿನ್ ಬಾವಾ ಉದ್ಘಾಟಿಸುವರು.
ಭೌಗೋಳಿಕ ವಿಸ್ತೀರ್ಣವನ್ನು ಆಧರಿಸಿ, ಜನರ ಅನು ಕೂಲಕ್ಕಾಗಿ ಹಾಗೂ ಆಡಳಿತ ಹಿತದೃಷ್ಟಿಯಿಂದ 12 ವಾರ್ಡ್ ಗಳನ್ನೊಳಗೊಂಡ ವಲಯವನ್ನು ಸುರತ್ಕಲ್‌ನಲ್ಲಿ ವಲಯ ಕಚೇರಿ 1 ಹಾಗೂ ವಲಯ 2 ಮತ್ತು 3 ಕಚೇರಿಯನ್ನು ಲಾಲ್‌ಬಾಗ್‌ನ ಮನಪಾ ಕಟ್ಟಡದಲ್ಲಿ ತೆರೆಯಲಾಗಿದೆ.
ಮಾ. 6ರಿಂದ ಸುರತ್ಕಲ್ ವಲಯ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಕಾರ್ಯನಿರ್ವಹಿಸಲಿವೆ. ಸುರತ್ಕಲ್, ಇಡ್ಯಾ, ಕಾಟಿಪಳ್ಳ, ಕೃಷ್ಣಾಪುರ, ಹೊಸಬೆಟ್ಟು, ಕುಳಾಯಿ, ಬೈಕಂಪಾಡಿ, ಪಣಂಬೂರು ಮತ್ತು ಬೆಂಗರೆ ವ್ಯಾಪ್ತಿಯ ಒಟ್ಟು 12 ಮನಪಾ ವಾರ್ಡ್‌ಗಳು ಸುರತ್ಕಲ್ ವಲಯ ವ್ಯಾಪ್ತಿಗೆ ಬರಲಿದೆ. ಇನ್ನು ಮುಂದೆ ಸುರತ್ಕಲ್ ವಲಯ ಕಚೇರಿಯಲ್ಲೇ ಎಲ್ಲ ಸೇವೆಗಳು ಪೂರ್ಣ ಪ್ರಮಾಣದಲ್ಲಿ ದೊರೆಯಲಿವೆ ಎಂದು ಮನಪಾ ಆಯುಕ್ತರ ಪ್ರಕಟನೆ ತಿಳಿಸಿದೆ.