×
Ad

ಮೂಡುಬಿದಿರೆ: ಕಾಮಧೇನು ಸಭಾಭವನ ಉದ್ಘಾಟನೆ

Update: 2017-03-05 16:11 IST

ಮೂಡುಬಿದಿರೆ, ಮಾ.5: ಯುವ ಜನತೆ ಅಪರಾಧ ಕೃತ್ಯಗಳಿಂದ ದೂರವಿರಬೇಕು. ಆ ನಿಟ್ಟಿನಲ್ಲಿ ಸಮಾಜದ ಸಂಘಟನೆಗಳು ಶ್ರಮಿಸಬೇಕಿದೆ. ಯುವಜನಾಂಗ ಸಾಗುತ್ತಿರುವ ನಾಗಾಲೋಟವು ಇಂದು ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಉತ್ತಮ ಶಿಕ್ಷಣ ಹಾಗೂ ಸಂಘಟಿತರಾಗುವ ಮೂಲಕ ಸಮಾಜವನ್ನು ಬಲಿಷ್ಠಗೊಳಿಸಬೇಕು. ಮೂಲಕ ನಾರಾಯಣ ಗುರುಗಳ ಆದರ್ಶವನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶ ನ್ಯಾ. ಬಿ.ಮನೋಹರ ಹೇಳಿದರು. 

ಮೂಡುಬಿದಿರೆಯ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ಇದರ ಕಟ್ಟಡ ನಿರ್ಮಾಣ ಸಮಿತಿಯ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಾಮಧೇನು ಸಮುದಾಯ ಸಭಾಭವನದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಾರಾಯಣ ಗುರುಗಳು ಒಂದು ಜಾತಿ, ಮತಕ್ಕೆ ಸೀಮಿತಗೊಂಡವರಲ್ಲ. ಜಾತಿ ಮತ ಯಾವುದಾದರೇನು ಮನುಷ್ಯ ಒಳ್ಳೆಯವನಾಗಿರಬೇಕು ಎಂಬ ಗುರುಗಳ ಆದರ್ಶ ಆಶಯವನ್ನು ಮನುಕುಲಕ್ಕೆ ತಲುಪಿಸುವ ಹೊಣೆಗಾರಿಯನ್ನು ನಾವು ನಿಭಾಯಿಸಬೇಕಿದೆ. ಜ್ಞಾನವೇ ಶಕ್ತಿ ಎಂಬ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರವು ಯಂತ್ರಗಳನ್ನು ಸೃಷ್ಟಿಸುವ ಕಾರ್ಖಾನೆಯಾಗದೆ ಮಾನವೀಯತೆ, ನೈತಿಕ ವೌಲ್ಯಗಳನ್ನು ಪಸರಿಸುವ ಕೇಂದ್ರಗಳಾಗಬೇಕು ಎಂದರು.

ನಾರಾಯಣ ಗುರುಗಳಿಗೆ ನವಕ ಕಲಶಾಭಿಷೇಕ ಹಾಗೂ ಗುರುಪೂಜೆಯ ಬಳಿಕ ಕಾಮಧೇನು ಸಭಾಭವನ, ನವೀಕೃತ ನಾರಾಯಣಗುರು ಸಭಾಭವನ, ಎಂ.ಶೀನಪ್ಪ ಮಂಗಳ ಭವನವು ಲೋಕಾರ್ಪಣೆಗೊಂಡಿತು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ಮನೋಹರ ನೆರವೇರಿಸಿದರು. ಬಲ್ಯೊಟ್ಟು ಸೇವಾಶ್ರಮದ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನವಿತ್ತರು.

ಜಾನಪದ ವಿದ್ವಾಂಸ ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ಮಹಾನ್ ಸಂದೇಶ ಸಾರಿದ ನಾರಾಯಣ ಗುರುಗಳ ಆಶಯವನ್ನು ಬಲಿಷ್ಠಗೊಳಿಸಬೇಕಿದೆ. ಯಾವುದೇ ಇತರ ಸಮಾಜವನ್ನು ನೋಯಿಸಲು ಸಂಘಟನೆಗಳನ್ನು ಬಳಸಿಕೊಳ್ಳಬಾರದು. ಕೋಟಿ-ಚೆನ್ನಯರ ಸಾವಿನಲ್ಲಿ ಸಮಾಜಕ್ಕೆ ಉತ್ತಮ ಪಾಠವಿದೆ. ಒಗ್ಗಟ್ಟನ್ನು ಸಮಾಜದ ಯುವಕರೆದೆಯಲ್ಲಿ ಸ್ಥಾಪಿಸಬೇಕಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಭಯಚಂದ್ರ ಜೈನ್, ಉದ್ಯಮಿ ರಮೇಶ್ ಕುಮಾರ್, ಶಾಸಕ ವಿನಯಕುಮಾರ್ ಸೊರಕೆ, ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಉಮನಾಥ ಕೋಟ್ಯಾನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಉದ್ಯಮಿ ನಾರಾಯಣ ಪಿ.ಎಂ., ಪ್ರಭಾಕರ ಡಿ. ಸುವರ್ಣ ದುಬೈ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಕೋಟ್ಯಾನ್, ಮೂಡುಬಿದಿರೆ ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಬಾನುಮತಿ ಎಂ. ಶೀನಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಉದ್ಯಮಿ ನಾರಾಯಣ ಪಿ.ಎಂ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಪೂವಪ್ಪಕುಂದರ್ ಅಧ್ಯಕ್ಷತೆ ವಹಿಸಿದ್ದರು.

ನಾರಾಯಣ ಗುರು ಸೇವಾದಳದ ಅಧ್ಯಕ್ಷ ರಂಜಿತ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಗೋಪಿನಾಥ್, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಅಧ್ಯಕ್ಷ ಪೂವಪ್ಪ ಕುಂದರ್, ನಾರಾಯಣ ಗುರು ಸೇವಾದಳದ ಅಧ್ಯಕ್ಷ ರಂಜಿತ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷ ಮಾಲತಿ ಗೋಪಿನಾಥ್, ರವೀಂದ್ರ ಎಂ. ಸುವರ್ಣ, ಪದ್ಮನಾಭ ಸಾಲ್ಯಾನ್, ವಾಸು ಪೂಜಾರಿ, ಲಕ್ಷ್ಮಣ ಪೂಜಾರಿ, ರೋಹನ್, ಸುರೇಶ್ ಪೂಜಾರಿ, ಜಗದೀಶ್ ಪೂಜಾರಿ, ರವಿಚಂದ್ರ ಕರ್ಕೇರ, ಗಿರೀಶ್ ಕುಮಾರ್, ಸುಶಾಂತ್ ಕರ್ಕೇರ, ನವೀನ್ ಕರ್ಕೇರ ಉಪಸ್ಥಿತರಿದ್ದರು.

ನಿತೇಶ್ ಕುಮಾರ್ ಮಾರ್ನಾಡು ಕಾರ್ಯಕ್ರಮ ನಿರೂಪಿಸಿದರು. ರೋಹನ್ ಅತಿಕಾರಿಬೆಟ್ಟು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News