×
Ad

ಏರ್ ಇಂಡಿಯಾ ಗಗನಸಖಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ!

Update: 2017-03-05 16:14 IST

ಕರಿಪ್ಪೂರ್,ಮಾ.5: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಗಗನಸಖಿ ಮೃತಪಟ್ಟ ಸ್ಥಿತಿಯಲ್ಲಿ ಕರಿಪ್ಪೂರ್‌ನಲ್ಲಿ ಪತ್ತೆಯಾಗಿದ್ದಾರೆ. ತಿರುವನಂತಪುರಂ ಪೇರೂಕ್ಕಡದ ಮೋನಿಷಾ ಮೋಹನ್ (24) ಮೃತಪಟ್ಟ ಗಗನ ಸಖಿಯಾಗಿದ್ದಾರೆ. ಅವರ ಪ್ಲಾಟ್‌ನಲ್ಲಿ ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.

ಶನಿವಾರ ಬೆಳಗ್ಗೆ ಕರ್ತವ್ಯಮುಗಿಸಿ ಕರಿಪ್ಪೂರಿನ ತನ್ನ ಪ್ಲಾಟ್ ಗೆ ಅಮರ ಹೋಗಿದ್ದರು. ಇಂದು ಬೆಳಗ್ಗೆ ಮೊನಿಷಾ ಪ್ಲಾಟ್‌ನಲ್ಲಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದರು.

ಆತ್ಮಹತ್ಯೆಯೆಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ರವಿವಾರ ರಾತ್ರಿ ಹೊರಡುವ ವಿಮಾನದಲ್ಲಿ ಅವರ ಕೆಲಸಕ್ಕೆ ತೆರಳಬೇಕಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News