ಓಮ್ನಿ - ರಿಟ್ಝ್ ನಡುವೆ ಢಿಕ್ಕಿ: ಐವರಿಗೆ ಗಾಯ
Update: 2017-03-05 18:24 IST
ಕಡಬ, ಮಾ.6: ಕಡಬ ಸಮೀಪದ ನೆಟ್ಟಣದಲ್ಲಿ ಓಮ್ನಿ - ರಿಟ್ಝ್ ನಡುವೆ ಢಿಕ್ಕಿ ಸಂಭವಿಸಿ ಐವರಿಗೆ ಗಾಯವಾದ ಘಟನೆ ನಡೆದಿದೆ.
ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ರಿಟ್ಝ್ ಹಾಗೂ ಕಡಬ ಕಡೆಗೆ ಆಗಮಿಸುತ್ತಿದ್ದ ಓಮ್ನಿ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ.
ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ನಡೆದ ಘಟನೆ ಇದಾಗಿದ್ದು, ಸ್ಥಳಕ್ಕೆ ಕಡಬ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.