×
Ad

ತೈವಾನ್, ಹಾಂಗ್‌ಕಾಂಗ್ ಚೀನಾದ ಅವಿಭಾಜ್ಯ ಅಂಗ: ಲಿ ಕೆಕಿಯಾಂಗ್

Update: 2017-03-05 19:56 IST

ಬೀಜಿಂಗ್, ಮಾ.5: ಚೀನಾದಿಂದ ತೈವಾನ್ ಪ್ರತ್ಯೇಕಗೊಳ್ಳುವುದಕ್ಕೆ ಚೀನಾದ ವಿರೋಧ ಅಚಲವಾಗಿದೆ ಎಂದು ಚೀನಾದ ಪ್ರಧಾನಿ ಲಿ ಕೆಕಿಯಾಂಗ್ ಘೋಷಿಸಿದ್ದು ಹಾಂಕಾಂಗ್ ಸ್ವತಂತ್ರಗೊಳ್ಳುವುದನ್ನೂ ಕಲ್ಪಿಸಲು ಅಸಾಧ್ಯ ಎಂದು ತಿಳಿಸಿದ್ದಾರೆ.

ತೈವಾನ್ ಸ್ವತಂತ್ರಗೊಳ್ಳಬೇಕೆಂಬ ಉದ್ದೇಶದಿಂದ ನಡೆಯುತ್ತಿರುವ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದೇವೆ ಮತ್ತು ಇದನ್ನು ನಿಗ್ರಹಿಸಲು ಬದ್ಧವಾಗಿದ್ದೇವೆ ಎಂದು ಚೀನಾದ ಸಂಸತ್ತಿನ ವಾರ್ಷಿಕ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡುತ್ತಾ ಲಿ ತಿಳಿಸಿದರು.

ತೈವಾನನ್ನು ಅದರ ಮಾತೃಭೂಮಿಯಿಂದ ಪ್ರತ್ಯೇಕಿಸುವ ಕಾರ್ಯವನ್ನು ಯಾರೇ ಮಾಡಿದರೂ ಅಥವಾ ಯಾವುದೇ ವಿಧದಲ್ಲಿ ಮಾಡಿದರೂ ನಾವದನ್ನು ಸಹಿಸೆವು ಎಂದ ಲಿ, ತೈವಾನ್ ಪ್ರದೇಶದೊಂದಿಗೆ ದೈನಂದಿನ ವಿಮಾನಯಾನ ಸೌಲಭ್ಯ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಮುಂತಾದ ಕ್ರಮಗಳನ್ನು ಮುಂದುವರಿಸುವ ಮೂಲಕ ಈ ದ್ವೀಪಪ್ರದೇಶದೊಂದಿಗಿನ ಸಂಪರ್ಕವನ್ನು ಹೆಚ್ಚಿಸಲು ಚೀನಾ ಬಯಸಿದೆ ಎಂದು ತಿಳಿಸಿದರು.

ಅಮೆರಿಕ ಅಧ್ಯಕ್ಷ ಸ್ಪರ್ಧೆಯಲ್ಲಿ ವಿಜಯಿಯಾದ ಬಳಿಕ ಟ್ರಂಪ್ ತೈವಾನ್‌ನ ಅಧ್ಯಕ್ಷೆ ತ್ಸೈ ಇಂಗ್-ವೆನ್ ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದರು ಮತ್ತು ಇನ್ನೊಂದು ಸಂದರ್ಭದಲ್ಲಿ ಏಕಚೀನ ನೀತಿಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು. ದಶಕಗಳಿಗಿಂತಲೂ ಹಳೆಯದಾದ ರಾಜತಾಂತ್ರಿಕ ಸ್ವರೂಪಗಳ ಬಗ್ಗೆ ಮಾತುಕತೆಯ ಅಗತ್ಯವಿದೆ ಎಂಬ ಟ್ರಂಪ್ ಹೇಳಿಕೆ ಬಗ್ಗೆ ಚೀನಾ ತಿೀವ್ರ ಪ್ರತಿರೋಧ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News