ತಾರಿಕಂಬಳ ಅನುಸ್ಮರಣಾ ಸಂಗಮ ಸಮಾಪ್ತಿ
ಬಜ್ಪೆ, ಮಾ.5: ಜಗತ್ತಿಗೆ ಒಬ್ಬರೇ ತಾಜುಲ್ ಉಲಮಾ ಅದು ಮರ್ಹೂಂ ಉಳ್ಳಾಲ ಸಯ್ಯಿದ್ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್ ಅಲ್ ಬುಖಾರಿ ತಂಙಳ್ ಮಾತ್ರ, ಅವರು ಜಗತ್ತು ಕಂಡ ಮಹಾನ್ ತ್ಯಾಗಿಯಾಗಿದ್ದರು ಎಂದು ಆಧ್ಯಾತ್ಮಿಕ ಪುರುಷ ಸಯ್ಯಿದ್ ಅತಾವುಲ್ಲ ತಂಙಳ್ ಉದ್ಯಾವರ ಹೇಳಿದರು.
ತಾರಿಕಂಬಳ ಎಸ್ಸೆಸ್ಸೆಫ್ ವತಿಯಿಂದ ನಡೆದ ತಾಜುಲ್ ಉಲಮಾ ಅನುಸ್ಮರಣಾ ಸಂಗಮದಲ್ಲಿ ದುಆ ಆಶಿರ್ವಚನ ಮಾಡುತ್ತಾ ಮಾತನಾಡಿದ ತಂಙಳ್ ತಾಜುಲ್ ಉಲಮಾರನ್ನು ಹತ್ತಿರದಿಂದ ಬಲ್ಲ ನನಗೆ ಅವರ 95ವರ್ಷಗಳ ಜೀವನದಲ್ಲಿ ಕಾಣ ಸಿಕ್ಕಿದ್ದು ಸುನ್ನತ್ ಜಮಾಅತಿಗಾಗಿ ಮಾಡಿದ ಅಗಣಿತ ಸೇವೆ, ಕಷ್ಟ,ತ್ಯಾಗಗಳು ಮಾತ್ರವಾಗಿದೆ, ಸುನ್ನತ್ ಜಮಾಅತಿಗಾಗಿ ಒಂದು ಪುರುಷಾಯುಸ್ಸನ್ನೇ ಮೀಸಲಿಟ್ಟವರಾಗಿದ್ದರು ಎಂದರು.
ಇದೇ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಎಸ್ಸೆಸ್ಸೆಫ್ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಮತ್ತು ಉದಾರ ದಾನಿ ಎಂ.ಎಸ್ ಮನ್ಸೂರ್ ಬಜ್ಪೆ ರವರನ್ನು ತಾರಿಕಂಬಳ ಶಾಖಾ ಎಸ್ಸೆಸ್ಸೆಫ್ ವತಿಯಿಂದ ಸನ್ಮಾನಿಸಲಾಯಿತು.
ಅತಾವುಲ್ಲ ತಂಙಳ್ ಶಾಲು ಹೊದಿಸಿ ಸ್ಮರಣಿಕೆ ನೀಡಿ ಆದರಿಸಿದರು. ಮಜ್ಲಿಸ್ ಗಾಣೆಮಾರ್ ಪ್ರೊಫೆಸರ್ ಫಿರೋಝ್ ಮುಈನಿ ಉದ್ಘಾಟಿಸಿದರು. ಸಿರಾಜುದ್ದೀನ್ ಸಖಾಫಿ ಕನ್ಯಾನ ತಾಜುಲ್ ಉಲಮಾ ಅನುಸ್ಮರಣಾ ಪ್ರಭಾಷಣ ಮಾಡಿದರು. ಗಝಾಲಿ ಮಸೀದಿಯ ಅಧ್ಯಕ್ಷ ಅಬ್ದುಲ್ ಬಶೀರ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಹಾಜಿ ಮುಹಮ್ಮದ್ ಅಲೀ, ಅಕ್ಬರ್ ಹಾಜಿ ಬಜ್ಪೆ, ಖಾದರ್ ಹಾಜಿ ಬಜ್ಪೆ, ಎಸ್‌ವೈಎಸ್ ಜಿಲ್ಲಾ ಕಾರ್ಯದರ್ಶಿ ಸಲೀಲ್ ಡಿಲಕ್ಸ್, ರಫೀಖ್ ಝೈನಿ, ಶಂಸುದ್ದೀನ್ ಝುಹ್ರಿ ಮುಂತಾದವರು ಉಪಸ್ಥಿತರಿದ್ದರು. ಬಿ.ಎ ಶಾಕಿರ್ ಅಹ್ಮದ್ ಸ್ವಾಗತಿಸಿ ವಂದಿಸಿದರು.