ಮೈಲುಗಲ್ಲಿಗೆ ಕಾರು ಢಿಕ್ಕಿ: ಬೆಂಗಳೂರಿನ ಟೆಕ್ಕಿ ಸಾವು
ಮುಂಡಗೋಡ : ಮೈಲುಗಲ್ಲಿಗೆ ಕಾರು ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಸಾಫ್ಟವೇರ ಇಂಜನಿಯರ ಮೃತಪಟ್ಟ ಘಟನೆ ತಾಲೂಕಿನ ಮುಂಡಗೋಡ-ಬಂಕಾಪುರ ರಸ್ತೆಯ ಸನವಳ್ಳಿ ಗ್ರಾಮದ ಹತ್ತಿರ ರವಿವಾರ ಸಂಜೆ ಸಂಭವಿಸಿದೆ.
ಮೃತಪಟ್ಟವವನನ್ನು ವೆಸ್ಟಬಂಗಾಲ ಮೂಲದ ಹಾಲಿ ಬೆಂಗಳೂರನಲ್ಲಿ ಸಾಫ್ಟವೇರ ಇಂಜಿನೀಯರ ಕೆಲಸ ಮಾಡುತ್ತಿರುವ ಕಪೀಲದೇಬ್ ಕರ್ಮಾಕರ(29) ಎಂದು ತಿಳಿದು ಬಂದಿದೆ.
ಭರತ್ ಚರಣಸಿಂಗ್,ಶ್ರೀಪೂರ್ಣಾ ಮಾದಕ, ನಿಮಿಷಾ ದಿಮಾನ್, ರಾಹುಲ್ ಕುಮಾರ್ (ಡೇಹ್ರಾಡೂನ) ಹಾಗೂ ಮೃತ ಕಪೀಲದೇವ ಕಾರಿನಲ್ಲಿ ಒಟ್ಟು ಐದು ಜನ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.
ಬೆಂಗಳೂರನಿಂದ ಗೋವಾಕ್ಕೆ ಹೋಗಿದ್ದ ಐದು ಜನರ ತಂಡ ಇವರು ರವಿವಾರ ಮುಂಡಗೋಡ ಮಾರ್ಗವಾಗಿ ಶಿಫ್ಟಕಾರಿನಲ್ಲಿ ಬೆಂಗಳೂರಗೆ ಪ್ರಯಾಣಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮೈಲುಗಲ್ಲಿಗೆ ಢಿಕ್ಕಿ ಹೊಡೆದಿದೆ.
ಢಿಕ್ಕಿ ರಭಸಕ್ಕೆ ಕಾರು ಮೂರು, ನಾಲ್ಕು ಭಾರೀ ಪಲ್ಟಿಹೊಡೆದಿದೆ ಎಂದು ಹೇಳಲಾಗಿದೆ.
ಕಾರಿನಲ್ಲಿದ್ದ ಕಪೀಲದೇವ್ ಗೆ ತಲೆಗೆ ಭಾರಿ ಹೊಡೆತ ಬಿದ್ದಿರುವುದರಿಂದ ಆತ ಮೃತನಾಗಿದ್ದಾನೆ. ಹಾಗೂ ಇತರರಿಗೂ ಕಾಲು ಕೈ, ಸೊಂಟಕ್ಕೆ ಕಣ್ಣಿಗೆ ಗಾಯವಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.