ಮೂಡುಬಿದಿರೆ: ಕಾಳಿಕಾಂಬಾ ದೇವಸ್ಥಾನ ಉತ್ಸವ ಆರಂಭ
Update: 2017-03-05 21:43 IST
ಮೂಡುಬಿದಿರೆ, ಮಾ.5: ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಐದು ದಿನಗಳ ಕಾಲ ನಡೆಯುವ ವರ್ಷಾವಧಿ ಮಹೋತ್ಸವವು ರವಿವಾರ ಆರಂಭಗೊಂಡಿತು. ಬೆಳಗ್ಗೆ ಅಲಂಗಾರು ಶ್ರೀ ಅಯ್ಯ ಜಗದ್ಗುರು ಮಠದಿಂದ ಗುರುದೇವರ ಪಾದುಕೆಯನ್ನು ಮೆರವಣಿಗೆಯೊಂದಿಗೆ ಕ್ಷೇತ್ರಕ್ಕೆ ತರಲಾಯಿತು.
ಕ್ಷೇತ್ರದ ಆಡಳಿತ ಮೊಕ್ತೇಸರ ಸುಂದರ ಜಿ. ಆಚಾರ್ಯ, ಮೊಕ್ತೇಸರರಾದ ಜಯಕರ ಪುರೋಹಿತ್, ಬಾಲಕೃಷ್ಣ ಉಳಿಯ, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶಿವರಾಮ ಆಚಾರ್ಯ ಉಳಿಯ, ಮಹಿಳಾ ಸಮಿತಿಯ ಅಧ್ಯಕ್ಷ ಮಾಲತಿ ರಾಮಚಂದ್ರ ಆಚಾರ್ಯ, ಮಠದ ವ್ಯವಸ್ಥಾಪಕ ವಿಶ್ವನಾಥ ಪುರೋಹಿತ್ ಹಾಗೂ ಸಮಾಜದ ನೂರಾರು ಮಂದಿ ಪಾಲ್ಗೊಂಡರು.