ಮೂಡುಬಿದಿರೆ: ಶ್ರೀಗೋಪಾಲಕೃಷ್ಣ ದೇವಸ್ಥಾನ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ
ಮೂಡುಬಿದಿರೆ, ಮಾ.5: ಮೂಡುವೇಣುಪುರ ಶ್ರೀಗೋಪಾಲಕೃಷ್ಣ ದೇವಳದ ಬಿಂಬ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಶನಿವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅಲಂಗಾರು ಬಡಗ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ವೇ.ಮೂ ಈಶ್ವರ ಭಟ್ ಆಶೀರ್ವಚನ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮೂಡುವೇಣುಪುರ ಶ್ರೀವೆಂಕಟರಮಣ ಮತ್ತು ಶ್ರೀಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ದೇವಳದ ಜೀರ್ಣೋದ್ಧಾರದಲ್ಲಿ ನೇತೃತ್ವವಹಿಸಿ, ಶ್ರಮಿಸಿದ ಶಿವಾನಂದ ಪ್ರಭು-ಸ್ವಾತಿ ಶಿವಾನಂದ ಪ್ರಭು ದಂಪತಿಯನ್ನು ಸನ್ಮಾನಿಸಲಾಯಿತು.
ತೀರ್ಥಮಂಟಪ, ತೀರ್ಥಬಾವಿ, ಪಾಣಿಪೀಠ ಕೊಡುಗೆ ನೀಡಿದ ಮನಿಷಾ ಶೆಟ್ಟಿ ಗೋವಾ, ದೇವಸ್ಥಾನದ ತಾಮ್ರದ ಹೊದಿಕೆಯ ದಾಣಿ ಶಶಿಕಲ ಶೆಟ್ಟಿ, ಜೀರ್ಣೋದ್ಧಾರ ವಿವಿಧ ಕೆಲಸಗಳನ್ನು ನಿರ್ವಹಿಸಿದರು ಶಿವರಾಯ ಪೈ, ಲಾಲಾ, ಪ್ರಶಾಂತ್, ಪ್ರಕಾಶ್, ಗಣೇಶ್ ಪೈ, ಚಂದ್ರಯ್ಯ ಆಚಾರ್, ಮಾಧವ ನಾರಾಯಣ ಮೇಸ್ತ್ರಿ, ಜಿನೇಶ್ ಜೈನ್ ಗೌರವಿಸಲಾಯಿತು.
ಶ್ರೀಗೋಪಾಲಕೃಷ್ಣ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಗುರುಪ್ರಸಾದ್ ಹೊಳ್ಳ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಶ್ರೀಪತಿ ಭಟ್, ಉಪಾಧ್ಯಕ್ಷ ಸುದರ್ಶನ ಎಂ, ಅರ್ಚಕ ರಾಘವೇಂದ್ರ ಭಟ್, ಉದ್ಯಮಿಗಳಾದ ಜಯರಾಮ ಶೆಟ್ಟಿ, ಅಶೋಕ್ ಮಲ್ಯ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಬಿ.ದುರ್ಗಾಪ್ರಸಾದ್ ಬಾಳಿಗ ಉಪಸ್ಥಿತರಿದ್ದರು.
ಶಾಂತಾರಾಮ ಕುಡ್ವ ಸ್ವಾಗತಿಸಿದರು. ದಿವ್ಯಾಸ್ಪತಿ ಕಾರ್ಯಕ್ರಮ ನಿರೂಪಿಸಿದರು. ಸ್ಮಿತಾ ಹೊಳ್ಳ ವಂದಿಸಿದರು.