×
Ad

ಅಪರಾಧ ಚಟುವಟಿಕೆ ಹತ್ತಿಕ್ಕಲು ‘ಆಪರೇಷನ್ ಬ್ಲೂಲೈಟ್’

Update: 2017-03-06 00:16 IST

ಕಾಸರಗೋಡು, ಮಾ.5: ನಾಗರಿಕರ ಸಹಭಾಗಿತ್ವದಿಂದ ಅಪರಾಧ ಚುಟುವಟಿಕೆಗೆ ಕಡಿವಾಣ ಹಾಕಲು ಕಾಸರಗೋಡು ಜಿಲ್ಲೆಯಲ್ಲಿ ‘ಆಪರೇಷನ್ ಬ್ಲೂ ಲೈಟ್’ ಎಂಬ ಹೆಸರಿನ ಕ್ರಿಯಾ ಯೋಜನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿಯವರು ಮುಂದೆ ಬಂದಿದ್ದಾರೆ.

     ಸಾರ್ವಜನಿಕರಿಗೆ ಇನ್ನು ಮುಂದೆ ಅಪರಾಧಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿಯವರ ಮೊಬೈಲ್ಗೆ ಮಾಹಿತಿ ನೀಡಬಹುದಾಗಿದೆ. ಇದಕ್ಕಾಗಿ 9497975812 ನಂಬರಿಗೆ ಕರೆ ಮಾಡಿ ಮಾಹಿತಿ ನೀಡಲು ಅವಕಾಶ ಮಾಡಿಕೊಡಲಾಗಿದೆ.

ಸಾರ್ವಜನಿಕರು ಅಪರಾಧ ಚಟುವಟಿಕೆ, ಅಪರಾಧಗಳಲ್ಲಿ ಭಾಗಿಯಾಗುವವರ ಬಗ್ಗೆಯೂ ಮಾಹಿತಿ ನೀಡಬಹುದಾಗಿದೆ.

   ಇದೇ ನಂಬರಿಗೆ ವಾಟ್ಸ್‌ಆ್ಯಪ್, ಮೆಸೇಜ್ ಮೂಲಕವೂ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ಬಗ್ಗೆ ರಹಸ್ಯವಾಗಿ ಇಡಲಾಗುವುದು. ಅಲ್ಲದೇ ದೊಡ್ಡ ಮಟ್ಟದ ಅಪರಾಧದ ಮಾಹಿತಿ ನೀಡುವವರಿಗೆ ಪಾರಿತೋಷಕ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News