ಎಸ್ಸೆಸ್ಸೆಫ್‌ನಿಂದ ಹಣ್ಣು ಹಂಪಲು ವಿತರಣೆ
Update: 2017-03-06 00:17 IST
ಉಳ್ಳಾಲ, ಮಾ.5: ಎಸ್ಸೆಸ್ಸೆಫ್ ಸಂಘಟನೆ ಧಾರ್ಮಿಕ ಚಟುವಟಿಕೆಗಳೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಕೊಣಾಜೆ ಠಾಣೆಯ ಉಪನಿರೀಕ್ಷಕ ಸುಗುಮಾರನ್ ಅಭಿಪ್ರಾಯಪಟ್ಟರು. ಎಸ್ಸೆಸ್ಸೆಫ್ ದೇರಳಕಟ್ಟೆ ವತಿಯಿಂದ ರಿಫಾಯಿ ಶೈಖ್‌ರ ಅನುಸ್ಮರಣೆ ಅಂಗವಾಗಿ ಕೊಣಾಜೆ ಅಸೈಗೋಳಿಯ ಅಭಯ ಅಶ್ರಮದ ನಿವಾಸಿಗಳಿಗೆ ಹಣ್ಣು ಹಂಪಲು ವಿತರಿಸಿ ಅವರು ಮಾತನಾಡಿದರು.
ಎಸ್ಸೆಸ್ಸೆಫ್ ದೇರಳಕಟ್ಟೆ ಅಧ್ಯಕ್ಷ ಹಸನ್ ಸಅದಿ, ಉಪಾಧ್ಯಕ್ಷರಾದ ಜುನೈದ್ ಸಖಾಫಿ, ಸುಹೈಲ್ ಶಾಂತಿಬಾಗ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ಕಾರ್ಯದರ್ಶಿ ಶರೀಫ್ ಮುಡಿಪು, ಪ್ರಧಾನ ಕಾರ್ಯದರ್ಶಿ ಸಫೀರ್ ರೆಂಜಾಡಿ, ಸದಸ್ಯರಾದ ಸಿದ್ದೀಕ್ ಮದನಿ, ಸಿದ್ದೀಕ್ ಕೋಟೆಕಾರ್, ಹಮೀದ್ ನಾಟೆಕಲ್, ಅಲಿ ಬದ್ಯಾರ್, ನೌಷಾದ್ ಬದ್ಯಾರ್, ಅಲ್ತಾಫ್ ಕಲ್ಪಾದೆ, ಅಶ್ರಫ್ ಅಸೈ, ರಫೀಕ್ ತಿಬ್ಲೆಪದವು ಉಪಸ್ಥಿತರಿದ್ದರು.