×
Ad

ಹವ್ಯಾಸಿ ಕಲಾವಿದರ ಕೇಂದ್ರೀಯ ಸಮಿತಿ ರಚನೆ

Update: 2017-03-06 00:17 IST

ಮಂಗಳೂರು, ಮಾ.5: ಯಕ್ಷಧ್ರುವ ಪಟ್ಲ ೌಂಡೇಶನ್ ಟ್ರಸ್ಟ್ ಇದರ ಹವ್ಯಾಸಿ ಕಲಾವಿದರ ಕೇಂದ್ರೀಯ ಸಮಿತಿ ಸಭೆಯು ಇತ್ತೀಚೆಗೆ ನಗರದಲ್ಲಿ ನಡೆಯಿತು.

ಪಟ್ಲ ೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಯಕ್ಷಧ್ರುವ ಪಟ್ಲ ೌಂಡೇಶನ್ ಟ್ರಸ್ಟ್‌ನ ಕಾರ್ಯಯೋಜನೆ ಹಾಗೂ ಮೇ 28ರಂದು ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯುವ ‘ಪಟ್ಲ ಸಂಭ್ರಮ-2017’ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.

ಈ ವರ್ಷ ಪಟ್ಲ ಸಂಭ್ರಮದಲ್ಲಿ ಓರ್ವ ಹವ್ಯಾಸಿ ಆಸಕ್ತ ಕಲಾವಿದನಿಗೆ 50 ಸಾವಿರ ರೂ. ಗೌರವಧನ ಮತ್ತು ಇಬ್ಬರು ಹವ್ಯಾಸಿ ಕಲಾವಿದರಿಗೆ ಯಕ್ಷಕಲಾ ಗೌರವ ಹಾಗೂ ಹವ್ಯಾಸಿ ಕಲಾವಿದರ ಮಕ್ಕಳಿಗೂ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಹವ್ಯಾಸಿ ಕಲಾವಿದರ ಕೇಂದ್ರೀಯ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಡಾ.ಪ್ರಭಾಕರ ಜೋಶಿ, ಪ್ರಧಾನ ಸಂಚಾಲಕರಾಗಿ ಭಾಸ್ಕರ ರೈ ಕುಕ್ಕುವಳ್ಳಿ, ಅಧ್ಯಕ್ಷರಾಗಿ ಜಬ್ಬಾರ್ ಸಮೋ ಸಂಪಾಜೆ, ಉಪಾಧ್ಯಕ್ಷರಾಗಿ ರಾಧಾಕೃಷ್ಣ ಕಲ್ಚಾರ್, ಸೇರಾಜೆ ಸೀತಾರಾಂ ಭಟ್, ಮಧುಕರ ಭಾಗವತರು, ಪ್ರ.ಕಾರ್ಯದರ್ಶಿಯಾಗಿ ಹರೀಶ್ ಬಳಂತಮೊಗರು, ಜೊ.ಕಾರ್ಯದರ್ಶಿಗಳಾಗಿ ಪುರುಷೋತ್ತಮ ಭಟ್ ನಿಡುವಜೆ, ಸುಧಾಕರ ಸಾಲ್ಯಾನ್, ಗೌರವ ಸಲಹೆಗಾರರಾಗಿ ಜೋಕಟ್ಟೆ ಮುಹಮ್ಮದ್, ಜಿ.ಕೆ.ಭಟ್ ಸೇರಾಜೆ, ಶಂಕರನಾರಾಯಣ ಮೈರ್ಪಾಡಿ, ಸಂಜಯ್ ರಾವ್, ಸಂಘಟನಾ ಕಾರ್ಯದರ್ಶಿಯಾಗಿ ಜನಾರ್ದನ ಅಮ್ಮುಂಜೆ, ಆನಂದ ಗುಡಿಗಾರ್, ಶೀವತ್ಸ ಎಸ್.ಆರ್.ಕಟೀಲು, ಕೋಶಾಕಾರಿಯಾಗಿ ಪುಷ್ಪರಾಜ ಕುಕ್ಕಾಜೆ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರವಿ ಅಲೆವೂರಾಯ, ದೇವಾನಂದ ಭಟ್, ರಾಮರಂಜನ್ ಕನ್ನಪಾಡಿ, ಕಿಶೋರ್ ಭಟ್ ಕೊಮ್ಮೆ, ರಾಕೇಶ್ ಹೊಸಬೆಟ್ಟು, ಕಾರುಣ್ಯನಿ ಇಡ್ಯಾ, ಹರಿಶ್ಚಂದ್ರ ನಾಯ್ಕಾ, ಮಹಾವೀರ ಪಾಂಡಿ, ವಿಶಾಂತ್ ಅಮ್ಮುಂಜೆ, ಪುಷ್ಕಳ್ ಕುಮಾರ್ ತೋನ್ಸೆ ಆಯ್ಕೆಯಾದರು.

ಸಭೆಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಭಾಸ್ಕರ ರೈ ಕುಕ್ಕುವಳ್ಳಿ, ಪ್ರಭಾಕರ ಜೋಶಿ, ಸುೀರ್ ಶೆಟ್ಟಿ ಪಡುಬಿದ್ರೆೆ, ಜಗದೀಶ ಶೆಟ್ಟಿ ಕಾರ್‌ಸ್ಟ್ರೀಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News