×
Ad

ಅನಾಥ ಮಕ್ಕಳಿಗೆ ಕಿಟ್ ವಿತರಣೆ

Update: 2017-03-06 00:17 IST

ಉಡುಪಿ, ಮಾ.5: ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ವಿಧಾನ ಸಭಾ ಕ್ಷೇತ್ರದ ಮಲ್ಪೆವಾರ್ಡ್ ಘಟಕದ ವತಿಯಿಂದ ಇತ್ತೀಚೆಗೆ ಉಡುಪಿ ರೈಲು ನಿಲ್ದಾಣ, ಬಸ್ ನಿಲ್ದಾಣ ಹಾಗೂ ನಿಟ್ಟೂರಿನ ಟೆಂಟ್‌ಗಳಲ್ಲಿ ಆಶ್ರಯ ಪಡೆದಿರುವ ಅನಾಥ ಭಿಕ್ಷೆ ಬೇಡುವ ಮಕ್ಕಳಿಗೆ ಊಟದ ಕಿಟ್ಟನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಪಿಐ ಉಡುಪಿ ಕ್ಷೇತ್ರ ಸಮಿತಿಯ ಸದಸ್ಯರಾದ ಝಮೀರ್ ಕಲ್ಮಾಡಿ, ಅನ್ಸಾರ್ ಮಲ್ಪೆ, ಮಲ್ಪೆ ವಾರ್ಡ್ ಅಧ್ಯಕ್ಷ ಎಫ್.ಎಂ.ಸಾದಿಕ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News