ರಾಜ್ಯಮಟ್ಟದ ಯುವಜನ ಮೇಳದ ಸಮಾರೋಪ

Update: 2017-03-05 19:02 GMT

ಉಡುಪಿ, ಮಾ.5: ಉಡುಪಿ ಜಿಲ್ಲಾಡಳಿತ, ಜಿಪಂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಯುವ ಸಂಘಗಳ ಒಕ್ಕೂಟ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ರಾಜ್ಯಮಟ್ಟದ ಯುವಜನ ಮೇಳದ ಸಮಾರೋಪ ಸಮಾರಂಭವು ರವಿವಾರ ಅಜ್ಜರಕಾಡು ಪುರಭವನದಲ್ಲಿ ಜರಗಿತು.

ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ದಿನಕರ ಬಾಬು, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಚಿಟ್ಟಪ್ಪ ಯಾದವ್, ತೀರ್ಪುಗಾರ ನಾಗರಾಜ್, ಕಾರ್ಕಳ ತಾಲೂಕು ಕ್ರೀಡಾ ಕಾರಿ ೆಡ್ರಿಕ್ ಲೋಬೊ ಉಪಸ್ಥಿತರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಉಡುಪಿ ತಾಲೂಕು ಕ್ರೀಡಾಕಾರಿ ನಾರಾಯಣ ರಾವ್ ವಂದಿಸಿದರು. ಕುಂದಾಪುರ ತಾಲೂಕು ಸಹಾಯಕ ಕ್ರೀಡಾಕಾರಿ ಕುಸುಮಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಪ್ರಕಾಶ್ ಕ್ರಮಧಾರಿ ಕಾರ್ಯಕ್ರಮ ನಿರೂಪಿಸಿದರು.

ಸ್ಪರ್ಧೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಒಟ್ಟು 1,300 ಸ್ಪರ್ಧಾಳುಗಳು ಭಾಗವಹಿಸಿದ್ದರು.

ವಿವಿಧ ಸ್ಪರ್ಧೆಗಳ ಫಲಿತಾಂಶದ ವಿವರ:

ಯುವಕರ ವಿಭಾಗ: ಭಾವಗೀತೆ: ಪ್ರ-ಅರುಣ ಕುಮಾರ್ ತುಮಕೂರು, ದ್ವಿ-ಬಸವರಾಜ್ ರಾಯಚೂರು, ತೃ-ಗುರುರಾಜ ಅಂಬಿಗ ಕಾರವಾರ. ರಂಗಗೀತೆ: ಪ್ರ-ಅರುಣ ಕುಮಾರ್ ತುಮಕೂರು, ದ್ವಿ- ಬಸಲಿಂಗಯ್ಯ ಬಾಗಲಕೋಟೆ, ತೃ- ಎಸ್.ಟಿ.ಗಿರೀಶ್ ಕೊಡಗು. ಲಾವಣಿ: ಪ್ರ-ರಮೇಶ್ ಗದಗ, ದ್ವಿ-ಮಂಜುನಾಥ್ ಚಿಕ್ಕಮಗಳೂರು, ತೃ- ಹಣಮಂತ ಬೆಳಗಾವಿ. ಗೀಗಿಪದ: ಪ್ರ-ಬಾಯಮ್ಮದೇವಿ ಯುವಕ ಮಂಡಲ ಗದಗ, ದ್ವಿ- ನಿಂಗಪ್ಪ ಕೊಪ್ಪಳ, ತೃ- ಸಿದ್ದರಾಜು ತಂಡ ಚಾಮರಾಜ ನಗರ. ಏಕಪಾತ್ರಭಿನಯ: ಪ್ರ- ಆಂಜನೇಯ ದಾವಣಗೆರೆ, ದ್ವಿ- ಬಿ.ಜೆ.ಜಾವೂರು ಬೆಳಗಾವಿ, ತೃ- ಸತೀಶ್ ಶಿವಮೊಗ್ಗ. ಭಜನೆ: ಪ್ರ-ಸಸಿಹಿತ್ಲು ಯುವಕರ ಬಳಗ ದ.ಕ., ದ್ವಿ-ಶ್ರೀಬಸವೇಶ್ವರ ಯುವಕ ಮಂಡಲ ಬೆಳಗಾವಿ, ತೃ- ಮಾಲತೇಶ ಯುವಕ ಸಂಘ ಕೊಪ್ಪಳ. ಕೋಲಾಟ: ಪ್ರ-ಜೈ ಮಾತೃಭೂಮಿ ಯುವಕ ಸಂಘ ಹಾವೇರಿ, ದ್ವಿ- ಬಿ.ಹೊನ್ನಪ್ಪ ತಂಡ ಮಂಡ್ಯ, ತೃ- ಜುಂಜೇಶ್ವರ ಯುವಕ ಸಂಘ ದಾವಣಗೆರೆ. ವೀರಗಾಸೆ: ಪ್ರ-ಶ್ರೀನಂಜುಡೇಶ್ವ ಯುವಕ ಸಂಘ ಶಿವಮೊಗ್ಗ, ದ್ವಿ- ವಿಠಲ ಯುವಕ ಸಂಘ ಕಾರವಾರ, ತೃ-ಗುರುಬಸವೇಶ್ವರ ಯುವಕ ಸಂಘ ಕೊಪ್ಪಳ. ಡೊಳ್ಳುಕುಣಿತ: ಪ್ರ- ಲಕ್ಷ್ಮಿನಾರಾಯಣ ಕಲಾತಂಡ ಮಂಡ್ಯ, ದ್ವಿ-ಕರಡಿಗುಡ್ಡ ಬಾಗಲಕೋಟೆ, ತೃ- ಸೇವಾಲಾಲ್ ಯುವಕ ಸಂಘ ಶಿವಮೊಗ್ಗ. ಜಾನಪದ ನೃತ್ಯ: ಪ್ರ-ಜೈ ಕಿಸಾನ್ ಸಾಂಸ್ಕೃತಿಕ ಮತ್ತು ಜನಪದ ಕಲಾ ಸಂಘ ಗದಗ, ದ್ವಿ-ಸ್ನೇಹಜೀವಿ ಕಲಾತಂಡ ಮಂಡ್ಯ, ತೃ- ಮಹಾತ್ಮ ಗಾಂ ಯುವಕ ಸಂಘ ಬಳ್ಳಾರಿ. ಜಾನಪದ ಗೀತೆ: ಪ್ರ-ಕರುನಾಡ ಕಲಾಸಂಘ ಮಂಡ್ಯ, ದ್ವಿ- ಎಸ್‌ಕೆಎಸ್ ಶರಣ ಬಳಗ ತುಮಕೂರು, ತೃ- ಅಂಬರೀಷ್ ವಾಲಿ ಕಲಬುರಗಿ. ಚರ್ಮವಾದ್ಯ ಮೇಳ: ಪ್ರ-ಪ್ರಭು ಹೂಗಾರ ತಂಡ ಬಾಗಲಕೋಟೆ, ದ್ವಿ-ರಾಜು ಶರಣಪ್ಪ ಭಜಂತ್ರಿ ಯುವಕ ಸಂಘ ಕೊರವಂಜಿ, ತೃ-ಡಾ.ಬಿ. ಆರ್.ಅಂಬೇಡ್ಕರ್ ಯುವಕ ಸಂಘ ದಾವಣಗೆರೆ. ಸಣ್ಣಾಟ: ಪ್ರ-ಮಿತ್ರ ಬಳಗ ಯುವಕ ಮಂಡಲಿ ಸುಳ್ಯ, ದ್ವಿ-ಸ್ವಾಮಿ ವಿವೇಕಾನಂದ ಕೊಪ್ಪಳ, ತೃ- ತುಂಗಾ ತೀರ್ಥ ಟ್ರಸ್ಟ್ ಶಿವಮೊಗ್ಗ. ದೊಡ್ಡಾಟ: ಪ್ರ-ಕಲ್ಲೇಶ್ವರ ಯುವಕ ಸಂಘ ತುಮ ಕೂರು, ದ್ವಿ- ಸಿದ್ದಾಪುರ ಕಾರವಾರ, ತೃ- ಕಲ್ಲೇಶ್ವರ ಕೃಪಾಪೋಷಕ ಸಂಘ ಚಿಕ್ಕಮಗಳೂರು. ಯಕ್ಷಗಾನ: ಪ್ರ- ವಿಮರ್ಶಾ ಯುವಕ ಸಂಘ ಸಾಲೂರು ಶಿವಮೊಗ್ಗ, ದ್ವಿ- ಅಯ್ಯಪ್ಪ ಸ್ವಾಮಿ ತಂಡ ಬೆಳಗಾವಿ.

ಯುವತಿಯರ ವಿಭಾಗ: ಭಾವಗೀತೆ: ಪ್ರ-ಪ್ರಿಯಾಂಕಾ ಅರೆಸಿದ್ದಿ ಬೆಳಗಾವಿ, ದ್ವಿ-ರಕ್ಷಿತಾ ಶಿವಮೊಗ್ಗ, ತೃ-ಗುರುಪ್ರಿಯಾ ದ.ಕ. ರಂಗಗೀತೆ: ಪ್ರ-ಗುರುಪ್ರಿಯಾ ದ.ಕ., ದ್ವಿ- ಪ್ರಿಯಾಂಕಾ ಅರೆಸಿದ್ದಿ ಬೆಳಗಾವಿ, ತೃ- ರಂಗಿಣಿ ಚಿಕ್ಕಮಗಳೂರು. ಲಾವಣಿ: ಪ್ರ-ಅಕ್ಷತಾ ದ.ಕ., ದ್ವಿ-ಗುರುಪ್ರಿಯಾ ನಾಯಕ್ ದ.ಕ., ತೃ-ಕಸ್ತೂರು ಉಪ್ಪಾರ ಗದಗ. ಗೀಗಿಪದ: ಪ್ರ-ಮಲಪ್ರಭೆ ಯುವತಿ ಮಂಡಲ ಗದಗ, ದ್ವಿ- ಚೌಡೇಶ್ವರಿ ಯುವತಿ ಮಂಡಳಿ ಚಿಕ್ಕಮಗಳೂರು, ತೃ- ಬೆಳಕು ಕಲಾತಂಡ ದಾವಣಗೆರೆ. ಏಕಪಾತ್ರಭಿನಯ: ಪ್ರ- ಕಾವ್ಯಶ್ರೀ ದ.ಕ., ದ್ವಿ- ರೂಪಾ ಕೊಡೂರು ಶಿವಮೊಗ್ಗ, ತೃ- ಜೀವಿತಾ ಕೊಡಗು. ಭಜನೆ: ಪ್ರ- ಕಲಾಜ್ಯೋತಿ ಯುವತಿ ಮಂಡಳಿ ಚಿಕ್ಕಮಗಳೂರು, ದ್ವಿ-ಸಂಗೀತಾ ಯುವತಿ ಕಲಾತಂಡ ರಾಯಚೂರು, ತೃ- ದಾಕ್ಷಾಯಿಣಿ ಯುವತಿ ಮಂಡಲ ಕಾರವಾರ. ಕೋಲಾಟ: ಪ್ರ-ಗುರುಮಿತ್ರ ಸಭಾ ದ.ಕ., ದ್ವಿ- ಪ್ರಾರ್ಥನಾ ಯುವತಿ ಮಂಡಳಿ ಶಿವಮೊಗ್ಗ, ತೃ- ದಾಕ್ಷಾಣಿಯಿ ಯುವತಿ ಮಂಡಲ ಕಾರವಾರ. ಸೋಬಾನೆ ಪದ: ಪ್ರ- ಶ್ರೀದೇವಿ ಯುವತಿ ಮಂಡಲ ಚಿಕ್ಕಮಗಳೂರು, ದ್ವಿ- ಸ್ಪೂರ್ತಿ ಯುವತಿ ಮಂಡಲ ರಾಯ ಚೂರು, ಮಲಪ್ರಭೆ ಯುವತಿ ಮಂಡಲ ಗದಗ. ಜಾನಪದ ನೃತ್ಯ: ಪ್ರ-ಗುರು ಮಿತ್ರ ಸಮೂಹ ದ.ಕ., ದ್ವಿ-ಪ್ರಾರ್ಥನಾ ಯುವತಿ ಮಂಡಲ ಶಿವಮೊಗ್ಗ, ತೃ- ಪ್ರಿಯಾ ಸಂಗಡಿಗರು ಕಾರವಾರ. ಜಾನಪದ ಗೀತೆ: ಪ್ರ-ಶ್ರೀದೇವಿ ಯುವತಿ ಮಂಡಲ ಚಿಕ್ಕಮಗಳೂರು, ದ್ವಿ- ಎಚ್.ಎಂ.ಲತಾ ಬಳ್ಳಾರಿ, ತೃ- ಮಲಪ್ರಭಾ ಯುವತಿ ಮಂಡಲ ಗದಗ. ರಾಗಿ/ಜೋಳ ಬೀಸುವ ಪದ: ಪ್ರ- ಹೊಳೆಯಮ್ಮ ಕೊಪ್ಪಳ, ದ್ವಿ- ನಿರಂತರ ಯುವತಿ ಮಂಡಲ ಕಾರವಾರ, ತೃ- ಮಾತೃಶ್ರೀ ಯುವತಿ ಮಂಡಲ ಶಿವಮೊಗ್ಗ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News