ಧರ್ಮಪ್ರಾಂತದ ಯೋಜನೆಗಳಿಗೆ ದೇಣಿಗೆ
Update: 2017-03-06 00:34 IST
ಉಡುಪಿ, ಮಾ.5: ಉಡುಪಿ ಧರ್ಮಪ್ರಾಂತದ ಯೋಜನೆಗಳಿಗೆ ಮಣಿಪಾಲ ಕೆಥೊಲಿಕ್ ಸಭೆಯ ವತಿಯಿಂದ 1.80 ಲಕ್ಷ ರೂ. ದೇಣಿಗೆ ನೀಡಲಾಯಿತು.
ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಇತ್ತೀಚೆಗೆ ಮಣಿಪಾಲ ಕ್ರೈಸ್ಟ್ ಚರ್ಚ್‌ಗೆ ಅಕೃತ ಭೇಟಿ ನೀಡಿದ ಸಂದರ್ಭ ಈ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಇಗರ್ಜಿಯ ಧರ್ಮಗುರು ರೆ.ಾ.ೆಡ್ರಿಕ್ ಡಿಸೋಜ, ಸಹಾಯಕ ಧರ್ಮಗುರು ರೆ.ಾ.ಎಡ್ವಿನ್ ಡಿಸೋಜ, ಘಟಕದ ಅಧ್ಯಕ್ಷೆ ಬರ್ನಾಡೆಟ್ ಪಿಂಟೋ, ನಿಕಟ ಪೂರ್ವ ವಲಯ ಅಧ್ಯಕ್ಷ ಲುವಿಸ್ ಡಿ.ಅಲ್ಮೇಡಾ, ಘಟಕದ ನಿಕಟಪೂರ್ವ ಅಧ್ಯಕ್ಷೆ ಮೇರಿ ಶ್ರೇಷ್ಠ ಮೊದಲಾದವರು ಉಪಸ್ಥಿತರಿದ್ದರು.