×
Ad

ಮಂಗಳೂರು: ಕೆರೆಗಳ ಅಭಿವೃದಿಗೆ ಮೀನಮೇಷ

Update: 2017-03-06 00:36 IST

ಮಂಗಳೂರು, ಮಾ.5: ನಗರದ ಜಪ್ಪು ಮಾರ್ಕೆಟ್ ಬಳಿ ಗುಜ್ಜರಕೆರೆ, ಮಂಗಳಾದೇವಿ ಬಳಿ ಎಮ್ಮೆಕೆರೆ, ಕಾವೂರಿನಲ್ಲಿ ಕಾವೂರು ಕೆರೆ, ಪಡೀಲ್ ಬಳಿ ಬೈರಾಡಿ ಕೆರೆ, ಬಜ್ಜೋಡಿಯಲ್ಲಿ ಬಜ್ಜೋಡಿ ಕೆರೆ, ಕುಳಾಯಿ ಬಳಿ ಬಗ್ಗುಂಡಿ ಕೆರೆ ಹೀಗೆ ಹಲವು ಪ್ರಮುಖ ಕೆರೆಗಳಿವೆ. ಪ್ರತೀ ಬೇಸಿಗೆ ಕಾಲದಲ್ಲಿ ನಗರ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ಬಗ್ಗೆ ಮಾತನಾಡುವ ಜನಪ್ರತಿನಿ ಮತ್ತು ಅಕಾರಿಗಳು ಆ ಬಳಿಕ ಮರೆತು ಬಿಡುತ್ತಾರೆ ಎಂಬುದಕ್ಕೆ ಇತ್ತೀಚಿನ ವಿದ್ಯಮಾನವೇ ಸಾಕ್ಷಿ.

ಕಳೆದ ಬೇಸಿಗೆ ಕಾಲದಲ್ಲಿ ಬರಗಾಲ ತೀವ್ರವಾಗಿತ್ತು. ಆ ವೇಳೆ ಜನಪ್ರತಿನಿಗಳು ಕೆರೆಗಳ ಅಭಿವೃದ್ಧಿ ಬಗ್ಗೆ ಮಾತನಾಡಿದ್ದರು. ಬಳಿಕ ಈ ಬಗ್ಗೆ ನಡೆದ ಬೆಳವಣಿಗೆ ಅಷ್ಟಕಷ್ಟೆ. ಈ ವರ್ಷ ಮಂಗಳೂರು ಮತ್ತು ಬಂಟ್ವಾಳ ತಾಲೂಕನ್ನು ಬರಗಾಲ ಎಂದು ಸರಕಾರವೇ ಘೋಷಿಸಿದೆ. ಆದರೆ ಈ ನಿಟ್ಟಿನಲ್ಲಿ ನಡೆದ ಚಟುವಟಿಕೆ ಮಾತ್ರ ಶೂನ್ಯ. ಈ ಮಧ್ಯೆ ಕೆರೆಗಳ ಅಭಿವೃದ್ಧಿಯ ಕುರಿತು ಮಾತುಗಳು ಕೇಳಿ ಬರುತ್ತಿವೆ. ಅಭಿವೃದ್ಧಿಯ ಬಗ್ಗೆ ಇಚ್ಛಾಶಕ್ತಿಯ ಕೊರತೆಯಿರುವುದರಿಂದ ಈ ಮಾತು, ಭರವಸೆಗಳು ಕೂಡ ಗಾಳಿಯಲ್ಲೇ ತೇಲಾಡುತ್ತಿವೆ.

ರಾಜ್ಯದ ಎಲ್ಲ ಕೆರೆಗಳ ಸಂರಕ್ಷಣೆ ಮಾಡಬೇಕು ಎಂದು ಈ ಹಿಂದೆಯೇ ಹೈಕೋರ್ಟ್ ಆದೇಶಿಸಿತ್ತು. ಅದರಂತೆ ಕಂದಾಯ ಇಲಾಖೆಯ ಮೂಲಕ ಕೆರೆಗಳ ಸಮೀಕ್ಷೆ ಮತ್ತು ಸರ್ವೇ ಕಾರ್ಯ ನಡೆಯಬೇಕು. ಆದರೆ ಈ ಬಗ್ಗೆ ಯಾವುದೇ ಕಾರ್ಯಕ್ರಮ ನಡೆದಿಲ್ಲ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕುಳಾಯಿ ಸಮೀಪದ ಬಗ್ಗುಂಡಿ ಕೆರೆ ವೀಕ್ಷಣೆ ಮಾಡಿ ಅಭಿವೃದ್ಧಿ ಕುರಿತು ವರದಿ ತಯಾರಿಸಲು ಅಕಾರಿ ವರ್ಗಕ್ಕೆ ಸೂಚನೆ ನೀಡಿದ್ದಾರೆ. ಈ ಕೆರೆಯ ಅಭಿವೃದ್ಧಿ ಬಗ್ಗೆ ಮೂರು ವರ್ಷದ ಹಿಂದೆಯೇ ಸ್ಥಳೀಯರು ಸಮಿತಿ ರಚಿಸಿ ಕೆರೆಯಲ್ಲಿ ತುಂಬಿದ ತ್ಯಾಜ್ಯವನ್ನು ಶ್ರಮದಾನದ ಮೂಲಕ ತೆಗೆಯುತ್ತಿದ್ದು, ಹೇಗಾದರೂ ಸರಿ ಈ ಕೆರೆಯನ್ನು ಅಭಿವೃದ್ಧಿಪಡಿಸಿ ಎಂದು ಮನವಿ ಮಾಡಿದ್ದಾರೆ.

ಗುಜ್ಜರಕೆರೆ ಅಭಿವೃದ್ಧಿ ಬಗ್ಗೆ ಕಳೆದ 15 ವರ್ಷಗಳಿಂದ ಸ್ಥಳೀಯರು ಹೋರಾಟ ಮಾಡುತ್ತಿದ್ದಾರೆ. ಈಗಾಗಲೇ ಇದಕ್ಕೆ ಸುಮಾರು 3 ಕೋಟಿ ರೂ. ವ್ಯಯಿಸಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ. ಇನ್ನು ಎಮ್ಮೆಕೆರೆಯೂ ಇದಕ್ಕೆ ಹೊರತಾಗಿಲ್ಲ. ಸುಮಾರು 3.5 ಎಕರೆ ವಿಸ್ತೀರ್ಣದ ಈ ಕೆರೆಯ ಬಹುಪಾಲು ಒತ್ತುವರಿಯಾಗಿದೆ. ಅಲ್ಲದೆ ಕೆರೆಯಲ್ಲಿ ಕೊಳಚೆ-ಹೂಳು ತುಂಬಿವೆ. ಈ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸುವ ಸಲುವಾಗಿ ಈಗಾಗಲೇ ಕೋಟ್ಯಂತರ ರೂ. ವ್ಯಯಿಸಲಾಗಿದೆ. ಆದರೂ ಕೆರೆ ಇನ್ನೂ ಅಭಿವೃದ್ಧಿಯಾಗಿಲ್ಲ.

ಇತ್ತೀಚೆಗೆ ಸಚಿವ ರಮಾನಾಥ ರೈ ಮತ್ತು ಶಾಸಕ ಜೆ.ಆರ್.ಲೋಬೊ ಭೇಟಿ ನೀಡಿ ಪರಿಶೀಲಿಸಿ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಇದರ ಹೂಳೆತ್ತಲು 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ನೀರು ತುಂಬಿದ ಕಾರಣ ಹೂಳೆತ್ತಲು ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ.

ನಗರ ಮತ್ತು ಆಸುಪಾಸಿನ ಗದ್ದೆ, ತೋಟ, ತಗ್ಗುಪ್ರದೇಶಗಳಿಗೆ ಮಣ್ಣು ತುಂಬಿಸಿ ಸಮತಟ್ಟು ಮಾಡಿ ಗಗನಚುಂಬಿ ಕಟ್ಟಡಗಳನ್ನು ಏರಿಸಲಾಗುತ್ತಿವೆ. ಜೊತೆಗೆ ಪಕ್ಕದ ಕೆರೆ, ತೋಡುಗಳನ್ನೂ ಅತಿಕ್ರಮಿಸಿ ನೀರಿನ ಮೂಲಕ್ಕೆ ಅಡ್ಡಿಪಡಿಸಲಾಗುತ್ತಿದೆ. ಕೆಲವೆಡೆ ಬೃಹತ್ ಕೈಗಾರಿಕೆಗಳ, ವಸತಿ ಸಮುಚ್ಚಯದ ತ್ಯಾಜ್ಯ ನೀರನ್ನು ಇಂತಹ ಕೆರೆಗಳಿಗೆ ಬಿಡಲಾಗುತ್ತದೆ. ಇದರಿಂದ ಪರಿಸರ ಮಾಲಿನ್ಯವೂ ಆಗುತ್ತದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಇದನ್ನು ತಡೆಗಟ್ಟದೆ ವೌನ ತಾಳಿದೆ.

ಒಟ್ಟಿನಲ್ಲಿ ಪ್ರತಿ ಬೇಸಿಗೆ ಸಂದರ್ಭದಲ್ಲಿ ಕೆರೆಗಳ ಅಭಿವೃದ್ಧಿ ಬಗ್ಗೆ ಮಾತನಾಡುವ ಜನಪ್ರತಿನಿಗಳು ಆ ಬಳಿಕ ಮರೆಯುತ್ತಾರೆ. ನೀರಿಗಾಗಿ ಜನರ ಹಾಹಾಕಾರಕ್ಕೆ ಕೊನೆಯೇ ಇಲ್ಲವಾಗಿದೆ. ಮಳೆಗಾಲದಲ್ಲಿ ಕೆರೆಯನ್ನು ಮರೆಯಲಾಗುತ್ತಿವೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಇದರ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಂಡರೆ ಬೇಸಿಗೆ ಕಾಲದಲ್ಲಿ ಉಪಕಾರಕ್ಕೆ ಬಂದೀತು. ಜನಪ್ರತಿನಿಗಳ ಈ ನಿರ್ಲಕ್ಷಕ್ಕೆ ಜನರೂ ವೌನ ತಾಳಿರುವುದು ವಿಪರ್ಯಾಸ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News