ಮಣಿಪಾಲ ಮ್ಯಾರಥಾನ್: ಆಳ್ವಾಸ್‌ನ ನವೀನ್-ಕಿರಣಗೆ ಪ್ರಶಸ್ತಿ
ಉಡುಪಿ, ಮಾ.5: ಮಣಿಪಾಲ ವಿವಿ, ಸಿಂಡಿಕೇಟ್ ಬ್ಯಾಂಕ್ ಮತ್ತು ಅದಾನಿ ಯುಪಿಸಿಎಲ್ ಪ್ರಾಯೋಜಕತ್ವದಲ್ಲಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯ ಸಹಯೋಗದೊಂದಿಗೆ ಮಣಿಪಾಲನಲ್ಲಿ ಹಮ್ಮಿಕೊಳ್ಳಲಾಗಿರುವ ಸ್ಟ್ರೋಕ್ ಜಾಗೃತಿಗಾಗಿ ಓಟ ‘ಮಣಿಪಾಲ ಮ್ಯಾರಥಾನ್’ನ ಪುರುಷರ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್‌ನ ನವೀನ್ ದಗರ್ ಮತ್ತು ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ನ ಕಿರಣ್ ಜಿತೂರ್ ಪಂಜಾಬ್ ಪ್ರಥಮ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಪುರುಷರ ವಿಭಾಗ: 2- ಆಳ್ವಾಸ್‌ನ ರಂಜಿತ್ ಸಿಂಗ್, 3- ಆಳ್ವಾಸ್‌ನ ಸಂತೋಷ್, 4-ಶಿಜು ಎಸ್., 5-ಅಂಬು ಕುಮಾರ್, 6-ವಿಕ್ಕಿ, 7-ರಾಜೇಶ್ ಕೆ.ಎಸ್., 8-ಸಂದೀಪ್ ಎನ್., 9- ಸದಾಶಿವ, 10- ಪರ್ಸ್ಯ. ಮಹಿಳೆಯರ ವಿಭಾಗ: 2- ಆಳ್ವಾಸ್‌ನ ತಿಪ್ಪವ್ವ ಸಣ್ಣಕ್ಕಿ, 3-ಅರ್ಚನಾ ಕೆ.ಎಂ., 4- ಸೌಮ್ಯಾ ಕೆ., 5-ಮೇಘಾ ಕೆ., 6-ಅಕ್ಷತಾ, 7-ಶಾಲಿನಿ ಕೆ.ಎಸ್., 8-ಪ್ರಿಯಾಂಕಾ, 9-ಶ್ರುತಿ ಎಚ್.ಡಿ., 10-ಗಂಗಾ ಶಿಂಗಲ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಎರಡು ವಿಭಾಗದ ವಿಜೇತರಿಗೆ ಪ್ರಥಮ 70 ಸಾವಿರ ರೂ., ದ್ವಿತೀಯ 35 ಸಾವಿರ ರೂ., ತೃತೀಯ 20 ಸಾವಿರ ರೂ., ನಾಲ್ಕನೆ ಸ್ಥಾನ 7,500 ರೂ., ಐದನೆ ಸ್ಥಾನ 6 ಸಾವಿರ ರೂ., 6ರಿಂದ 10ನೆ ಸ್ಥಾನಕ್ಕಾಗಿ 5,000 ರೂ. ನಗದು ಬಹುಮಾನ ನೀಡಲಾಯಿತು. ಅದೇ ರೀತಿಯಲ್ಲಿ ವಿಭಾಗದ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು.
10 ಕಿ.ಮೀ. ಓಟ: ಮಹಿಳೆಯರ (16-35ವರ್ಷ) ವಿಭಾಗ: ಪ್ರ- ಮಮತಾ, ದ್ವಿ- ಸುಪ್ರೀತಾ ಬಿ.ಕೆ., ತೃ- ದೀಕ್ಷಾ ಬಿ. ಪುರುಷರ ವಿಭಾಗ: ಪ್ರ- ಪ್ರವೀಣ್, ದ್ವಿ- ವಿಜಯ್, ತೃ- ಚೇತನ್ ಜಿ.ಎಸ್. ಹಿರಿಯ ಮಹಿಳೆಯರ ವಿಭಾಗ(35-50ವರ್ಷ): ಪ್ರ- ಯುಲಿಯಾ, ದ್ವಿ- ರೇಖಾ, ತೃ- ಡಾ.ಪ್ರಮೀಳಾ. ಪುರುಷರ ವಿಭಾಗ: ಪ್ರ- ಶಂಕರ, ದ್ವಿ- ವಿಶ್ವನಾಥ್ ಕೋಟ್ಯಾನ್, ತೃ-ದಿವಾಕರ್ ಜಿ. 50ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ: ಪ್ರ- ಅರುಣಾ ಕಲಾ, ದ್ವಿ- ಲಲಿತಾ ನಾಕ್, ತೃ- ಬಬಿತಾ. ಪುರುಷರ ವಿಭಾಗ: ಪ್ರ- ಉದಯ ಕುಮಾರ್ ಶೆಟ್ಟಿ, ದ್ವಿ- ಮಾಧವ, ತೃ- ಓಂಶಿವ ಕೋಟ್ಯಾನ್.
5ಕಿ.ಮೀ. ಓಟ: ಬಾಲಕಿಯರ ವಿಭಾಗ: ಪ್ರ- ಸುಮಾ ನಿಟ್ಟೆ, ದ್ವಿ- ಭೂಮಿಕಾ ನಿಟ್ಟೆ, ತೃ- ಮಂಜುಳಾ ವೈ.ಎಚ್. ನಿಟ್ಟೆ. ಮಕ್ಕಳ ವಿಭಾಗ: ಪ್ರ- ದಿನೇಶ್ ನಿಟ್ಟೆ, ದ್ವಿ- ಯಲ್ಲಪ್ಪ ನಿಟ್ಟೂರು, ತೃ- ರಿಹಾನ್ ನಿಟ್ಟೆ.
ಮ್ಯಾರಥಾನ್‌ಗೆ ಚಾಲನೆ
ಮಣಿಪಾಲ ಕೆಎಂಸಿ ಗ್ರೀನ್ಸ್ ನಲ್ಲಿ ನಡೆದ ಮ್ಯಾರಥಾನ್‌ಗೆ ಸಿಂಡಿಕೇಟ್ ಬ್ಯಾಂಕ್ ಕಾರ್ಯನಿರ್ವಹಣಾ ನಿರ್ದೇಶಕ ಎಸ್.ಎಸ್.ಮಲ್ಲಿಕಾರ್ಜುನ್ ರಾವ್ ಚಾಲನೆ ನೀಡಿದರು. ಸಮಾ ರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಎಸ್.ಎಸ್.ಮಲ್ಲಿಕಾರ್ಜುನ್ ರಾವ್, ಮಣಿ ಪಾಲ ವಿವಿ ಚಾನ್ಸೆಲರ್ ಪ್ರೊ.ಡಾ.ಎಚ್.ಎಸ್.ಬಲ್ಲಾಳ್, ರಿಜಿಸ್ಟ್ರಾರ್ ಡಾ.ನಾರಾಯಣ ಸಭಹಿತ್, ಉಪ ಕುಲಪತಿ ವಿನೋದ್ ಭಟ್, ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಕೆ.ಟಿ.ರೈ, ಅದಾನಿ ಯುಪಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಆಳ್ವ, ಸತೀಶ್ ಕಾಮತ್, ಎಸ್ಪಿ ಕೆ.ಟಿ.ಬಾಲಕೃಷ್ಣ, ಎಂಐಟಿ ನಿರ್ದೇಶಕ ಡಾ.ಜಿ.ಕೆ. ಪ್ರಭು ಮುಖ್ಯ ಅತಿಥಿಗಳಾಗಿ ಭಾವಹಿಸಿದ್ದರು.
ಮ್ಯಾರಥಾನ್ ಕಮಿಟಿ ಅಧ್ಯಕ್ಷ ಕೆ. ರಘು ಪತಿ ಭಟ್, ಕಾರ್ಯದರ್ಶಿ ಡಾ.ವಿನೋದ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.